ನವಾಲ್ನಿ ಕೈಗಳ ಸ್ಪರ್ಶಜ್ಞಾನ ಕಳೆದುಕೊಳ್ಳುತ್ತಿದ್ದಾರೆ: ವಕೀಲೆ

Update: 2021-04-08 17:30 GMT

ಮಾಸ್ಕೋ (ರಶ್ಯ), ಎ. 8: ಜೈಲಿನಲ್ಲಿರುವ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದು, ಅವರ ದೇಹ ಸ್ಥಿತಿ ಹದಗೆಡುತ್ತಿದೆ ಎಂದು ಅವರ ವಕೀಲರು ಬುಧವಾರ ಹೇಳಿದ್ದಾರೆ. ಅದೇ ವೇಳೆ, ಅವರ ಕೈಗಳು ಸ್ಪರ್ಶಜ್ಞಾನವನ್ನು ಕಳೆದುಕೊಳ್ಳುತ್ತಿವೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ತನ್ನ ಬೆನ್ನುನೋವು ಮತ್ತು ಕಾಲುಗಳ ಸ್ಪರ್ಶಜ್ಞಾನ ಕ್ಷೀಣತೆಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ನವಾಲ್ನಿ ಒಂದು ವಾರದಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಹಣ ಅವ್ಯವಹಾರ ಆರೋಪದಲ್ಲಿ ಅವರು ಎರಡೂವರೆ ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ನವಾಲ್ನಿಯ ವಕೀಲರ ತಂಡವೊಂದು ಬುಧವಾರ ಮಾಸ್ಕೋದಿಂದ 100 ಕಿ.ಮೀ. ದೂರದ ಪೊಕ್ರೊವ್ ಪಟ್ಟಣದಲ್ಲಿರುವ ಜೈಲಿನಲ್ಲಿ ಅವರನ್ನು ಭೇಟಿ ಮಾಡಿದೆ.

ನವಾಲ್ನಿ ಈಗಲೂ ಆಹಾರ ತಿರಸ್ಕರಿಸುತ್ತಿದ್ದಾರೆ ಹಾಗೂ ಅವರು ಕೆಮ್ಮುತ್ತಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ.

‘‘ಅವರ ಪರಿಸ್ಥಿತಿ ಚೆನ್ನಾಗಿಲ್ಲ. ಅವರಿಗೆ ಸೌಖ್ಯವಿಲ್ಲ’’ ಎಂದು ವಕೀಲೆ ಓಲ್ಗಾ ಮಿಖೈಲೋವ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ‘‘ಅವರಿಗೆ ಯಾರೂ ಚಿಕಿತ್ಸೆ ನೀಡುತ್ತಿಲ್ಲ’’ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News