ಮಿಸ್ ಶ್ರೀಲಂಕಾ ವಿಜೇತೆಯ ಕಿರೀಟ ಎಳೆದು, ಹಲ್ಲೆ: ಮಿಸ್ ವರ್ಲ್ಡ್ ಕರೋಲಿನ್ ಜೂರಿ ಬಂಧನ

Update: 2021-04-08 18:17 GMT
(Source: Colombo Gazette/YouTube)

ಕೊಲಂಬೊ: ವೇದಿಕೆಯಲ್ಲೇ “ಮಿಸ್ ಶ್ರೀಲಂಕಾ" ವಿಜೇತೆಯ ಕಿರೀಟವನ್ನು ಎಳೆದು ಹಲ್ಲೆ ನಡೆಸಿದ್ದ ಆರೋಪದ ಮೇಲೆ ಹಾಲಿ ಮಿಸ್ ವರ್ಲ್ಡ್ ಕರೋಲಿನ್ ಜೂರಿ ಅವರನ್ನು ಕೊಲಂಬೊ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೊಲಂಬೊದ ನೆಲಮ್ ಪೊಕುನಾ ರಂಗಮಂದಿರದಲ್ಲಿ ರವಿವಾರದ ಕಾರ್ಯಕ್ರಮದಲ್ಲಿ ಪುಷ್ಪಿಕಾ ಡಿ ಸಿಲ್ವಾ ಅವರನ್ನು "ಮಿಸ್ ಶ್ರೀಲಂಕಾ 2020" ಎಂದು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಮಿಸ್ ವರ್ಲ್ಡ್  ಕರೋಲಿನ್ ಜೂರಿ ಅವರು ಪುಷ್ಪಿಕಾ ಧರಿಸಿದ್ದ ಕಿರೀಟವನ್ನು ತೆಗೆದು ಹಾಕಿದರು. ಪುಷ್ಪಿಕಾ ವಿಚ್ಛೇದನ ಪಡೆದಿದ್ದು, ಆಕೆ  ಕಿರೀಟ ಧರಿಸಲು ಅರ್ಹಳಲ್ಲ. ಮೊದಲ ರನ್ನರ್ ಅಪ್ ಕಿರೀಟ ಧರಿಸಬೇಕೆಂದು ಆಕೆಗೆ ಕಿರೀಟವನ್ನು ಧರಿಸಿದರು. ಇದರಿಂದ ವಿಚಲಿತರಾದ ಪುಷ್ಪಿಕಾ ವೇದಿಕೆಯಿಂದ ನಿರ್ಗಮಿಸಿದರು.

ಜೂರಿ 2019ರಲ್ಲಿ "ಮಿಸ್ ಶ್ರೀಲಂಕಾ" ಆಗಿದ್ದರು ಮತ್ತು ಕ್ಯಾಲಿಫೋರ್ನಿಯಾ ಮೂಲದ ಕಂಪನಿಯೊಂದು ಆಯೋಜಿಸಿದ್ದ "ಮಿಸೆಸ್ ವರ್ಲ್ಡ್" ಸ್ಪರ್ಧೆಯಲ್ಲಿ ಜಯ ಗಳಿಸಿದ್ದರು.

ಘಟನೆಯ ನಂತರ ಪುಷ್ಪಿಕಾ ಡಿ ಸಿಲ್ವಾ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದರು.  ಈ ಘಟನೆಯಿಂದ ನೆರೆದಿದ್ದ ಲೈವ್ ಸೋಷಿಯಲ್ ಮೀಡಿಯಾ ಪ್ರೇಕ್ಷಕರು ಅಚ್ಚರಿಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News