ಬಡ ದೇಶಗಳಿಗೆ ಲಸಿಕೆಗಾಗಿ ಈ ತಿಂಗಳು 2 ಬಿಲಿಯ ಡಾಲರ್ ಘೋಷಣೆ: ವಿಶ್ವಬ್ಯಾಂಕ್

Update: 2021-04-10 16:55 GMT

ವಾಶಿಂಗ್ಟನ್, ಎ. 10: ಸುಮಾರು 40 ಅಭಿವೃದ್ಧಿಶೀಲ ದೇಶಗಳಲ್ಲಿ ಕೊರೋನ ವೈರಸ್ ಲಸಿಕಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ವಿಶ್ವಬ್ಯಾಂಕ್ ಎಪ್ರಿಲ್‌ನಲ್ಲಿ 2 ಬಿಲಿಯ ಡಾಲರ್ (ಸುಮಾರು 14,950 ಕೋಟಿ ರೂಪಾಯಿ) ಹಣಕಾಸು ನೆರವು ಘೋಷಿಸಲಿದೆ ಎಂದು ಬ್ಯಾಂಕ್‌ನ ಕಾರ್ಯನಿರ್ವಹಣೆ ವಿಭಾಗದ ಆಡಳಿತ ನಿರ್ದೇಶಕ ಆ್ಯಕ್ಸಲ್ ವಾನ್ ಟ್ರೋಟ್ಸೆಂಬರ್ಗ್ ಶುಕ್ರವಾರ ಹೇಳಿದ್ದಾರೆ.

ಇದು ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಲಸಿಕೆ ಅಭಿವೃದ್ಧಿ, ವಿತರಣೆ ಮತ್ತು ಉತ್ಪಾದನೆಗಾಗಿ ವಿಶ್ವಬ್ಯಾಂಕ್ ಈಗಾಗಲೇ ನಿಗದಿಪಡಿಸಿರುವ 12 ಬಿಲಿಯ ಡಾಲರ್ (89,680 ಕೋಟಿ ರೂಪಾಯಿ) ನೆರವಿನ ಭಾಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News