​ಮ್ಯಾನ್ಮಾರ್: ಬಂಡುಕೋರರ ದಾಳಿ; 10 ಪೊಲೀಸ್ ಸಾವು

Update: 2021-04-10 17:31 GMT

ಯಾಂಗನ್ (ಮ್ಯಾನ್ಮಾರ್), ಎ. 10: ಮ್ಯಾನ್ಮಾರ್ನ ಸೇನ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರ ಮೇಲೆ ಸೈನಿಕರು ಗುಂಡು ಹಾರಿಸುವುದನ್ನು ವಿರೋಧಿಸುತ್ತಿರುವ ಬಂಡುಕೋರ ಗುಂಪುಗಳ ಒಕ್ಕೂಟವೊಂದು ಶನಿವಾರ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿ ಕನಿಷ್ಠ 10 ಪೊಲೀಸರನ್ನು ಹತ್ಯೆಗೈದಿದೆ ಎಂದು ಸ್ಥಳೀಯ ಮಾಧ್ಯಮಗಳು ವರಿದಿ ಮಾಡಿವೆ.
ಅರಕಾನ್ ಆರ್ಮಿ, ಟಾಂಗ್ ನ್ಯಾಶನಲ್ ಲಿಬರೇಶನ್ ಆರ್ಮಿ ಮತ್ತು ಮ್ಯಾನ್ಮಾರ್ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ ಆರ್ಮಿಗೆ ಸೇರಿದ ಬಂಡುಕೋರರು ಶಾನ್ ರಾಜ್ಯದಲ್ಲಿರುವ ನೌಂಗ್ಮೊನ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರು ಎಂದು ಮಾಧ್ಯಮಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News