ಕರಿಯ ಸೇನಾ ಲೆಫ್ಟಿನೆಂಟ್ ಮೇಲೆ ಹಲ್ಲೆ: ಪೊಲೀಸ್ ಅಧಿಕಾರಿ ವಜಾ

Update: 2021-04-12 17:31 GMT

ರಿಚ್‌ಮಂಡ್ (ಅಮೆರಿಕ), ಎ. 12: ಸಾರಿಗೆ ನಿಲುಗಡೆ ಸ್ಥಳದಲ್ಲಿ ಕರಿಯ ಸೇನಾ ಲೆಫ್ಟಿನೆಂಟ್ ಜನರಲ್ ಕ್ಯಾರನ್ ನಝಾರಿಯೊ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಓರ್ವ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್ 5ರಂದು ಸೇನಾ ಅಧಿಕಾರಿಯನ್ನು ತಡೆಗಟ್ಟಿದ ಇಬ್ಬರು ಪೊಲೀಸ್ ಅಧಿಕಾರಿಗಳು, ಅವರತ್ತ ತಮ್ಮ ಬಂದೂಕುಗಳನ್ನು ಗುರಿಯಿರಿಸಿದರು ಹಾಗೂ ಅವರ ಮುಖಕ್ಕೆ ಮೆಣಸಿನ ದ್ರಾವಣ ಎರಚಿದರು ಎಂದು ಆರೋಪಿಸಲಾಗಿದೆ.

 ಪೊಲೀಸ್ ಇಲಾಖೆ ರೂಪಿಸಿರುವ ನಿಯಮಗಳನ್ನು ಪೊಲೀಸ್ ಅಧಿಕಾರಿ ಜೋ ಗುಟಿಯರೆಝ್ ಅನುಸರಿಸಿಲ್ಲ ಎಂಬ ತೀರ್ಮಾನಕ್ಕೆ ತನಿಖಾ ಸಮತಿಯೊಂದು ಬಂದ ಬಳಿಕ, ಅವರನ್ನು ಕೆಲಸದಿಂದ ವಜಾಗೊಳಿಸಲಾಉಯಿತು.

ಹಲ್ಲೆಯಲ್ಲಿ ಶಾಮೀಲಾಗಿದ್ದ ಇನ್ನೋರ್ವ ಪೊಲೀಸ್ ಅಧಿಕಾರಿಗೆ ಯಾವ ದಂಡನೆ ವಿಧಿಸಲಾಗಿದೆ ಎನ್ನುವುದನ್ನು ಹೇಳಿಕೆ ತಿಳಿಸಿಲ್ಲ.

ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಸೇನಾಧಿಕಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News