ಇರಾನ್‌ನಲ್ಲಿ ಭೂಕಂಪನ

Update: 2021-04-18 17:39 GMT

       ಟೆಹರಾನ್,ಎ.18: ನೈಋತ್ಯ ಇರಾನ್‌ನ ಪರ್ಶಿಯನ್ ಕೊಲ್ಲಿ ಪ್ರದೇಶದುದ್ದಕ್ಕೂ ರವಿವಾರ ಬೆಳಗ್ಗೆ ಭೂಕಂಪನವಾಗಿದೆ.ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆಯನ್ನು ದಾಖಲಿಸಿರುವ ಈ ಭೂಕಂಪದ ಕೇಂದ್ರ ಬಿಂದು ಬಂದರು ನಗರವಾದ ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಬಂದರ್ ಗೆನಾವೆಹ್‌ನಲ್ಲಿತ್ತೆಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ತಿಳಿಸಿದೆ. ಇದರ ಬೆನ್ನಲ್ಲೇ ಎರಡನೇ ಪಶ್ಚಾತ್ ಕಂಪನ ಸಂಭವಿಸಿದ್ದು, ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.5ರಷ್ಚು ದಾಖಲಾಗಿತ್ತೆಂದು ಇಲಾಖೆ ತಿಳಿಸಿದೆ.

 ಭೂಕಂಪನವಾದ ಸ್ಥಳದಿಂದ 60 ಮೈಲು ದೂರದಲ್ಲಿ ಬುಶೆರಾ ಅಣುವಿದ್ಯುತ್ ಸ್ಥಾವರವಿರುವುದಾಗಿ ವರದಿ ಹೇಳಿದೆ.

   ಇರಾನ್ ಪ್ರಮುಖ ಭೂಕಂಪ ಪೀಡಿತ ವಲಯದಲ್ಲಿದ್ದು, ಅಲ್ಲಿ ಸರಾಸರಿ ಪ್ರತಿ ದಿನ ಒಂದು ಭೂಕಂಪದ ಅನುಭವವಾಗುತ್ತಿದೆ. 2003ರಲ್ಲಿ ಬಾಮ್ ನಗರದಲ್ಲಿ ಸಂಭವಿಸಿದ 6.6 ರಿಕ್ಟರ್ ತೀವ್ರತೆಯ ಭೂಕಂಪದಿಂದಾಗಿ ಕನಿಷ್ಠ 26 ಸಾವಿರ ಮಂದಿ ಮೃತಪಟ್ಟಿದ್ದರು.

2017ರಲ್ಲಿ ಪಶ್ಚಿಮ ಇರಾನ್‌ನಲ್ಲಿ 7 ರಿಕ್ಟರ್ ತೀವ್ರತೆಯ ಭೂಕಂಪವಾಗಿದ್ದು, ಕನಿಷ್ಠ 600 ಮಂದಿ ಸಾವನ್ನಪ್ಪಿದ್ದರು ಹಾಗೂ 9 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News