ಮಗುಚಿದ ದೋಣಿ: 100ಕ್ಕೂ ಅಧಿಕ ವಲಸಿಗರ ಸಾವು

Update: 2021-04-23 18:21 GMT

ಟ್ರಿಪೋಲಿ (ಲಿಬಿಯ), ಎ. 23: ಲಿಬಿಯ ಕರಾವಳಿಯ ಸಮುದ್ರದಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ರಬ್ಬರ್ ದೋಣಿಯೊಂದು ಮಗುಚಿದ್ದು, 100ಕ್ಕೂ ಅಧಿಕ ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

 ಸುಮಾರು 130 ಜನರನ್ನು ಹೊತ್ತಿದ್ದ ದೋಣಿಯು ಬುಧವಾರ ಲಿಬಿಯ ಕರಾವಳಿಯ ಅಂತರ್‌ರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿತು ಎಂದು ಯುರೋಪ್‌ನ ಮಾನವೀಯ ನೆರವು ಸಂಘಟನೆ ‘ಎಸ್‌ಒಎಸ್ ಮೆಡಿಟರೇನೀ’ ಗುರುವಾರ ಹೇಳಿದೆ. ಆಗ ಎಸ್‌ಒಎಸ್ ಮೆಡಿಟರೇನೀಗೆ ಸೇರಿದ ‘ಓಶನ್ ವೈಕಿಂಗ್’ ಹಡಗು ಮತ್ತು ಇತರ ಮೂರು ವಾಣಿಜ್ಯ ಹಡಗುಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

‘‘ನಾವು ಸ್ಥಳಕ್ಕೆ ಇಂದು (ಗುರುವಾರ) ಬಂದಿರುವುದರಿಂದ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ನಮ್ಮ ಹೃದಯ ಚೂರಾಗಿದೆ’’ ಎಂದು ‘ಓಶನ್ ವೈಕಿಂಗ್’ನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮನ್ವಯಕಾರಿಣಿ ಲೂಯಿಸಾ ಆ್ಯಲ್ಬೆರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News