×
Ad

ಭಾರತ ಪ್ರಯಾಣ ನಿಷೇಧಿಸಿದ ಇಸ್ರೇಲ್

Update: 2021-05-02 23:39 IST

ಜೆರುಸಲೇಮ್, ಮೇ 2: ಅಗಾಧ ಪ್ರಮಾಣದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಭಾರತ ಮತ್ತು ಇತರ ಆರು ದೇಶಗಳಿಗೆ ತನ್ನ ಪ್ರಜೆಗಳು ಪ್ರಯಾಣಿಸುವುದನ್ನು ಇಸ್ರೇಲ್ ನಿಷೇಧಿಸಿದೆ.

ಭಾರತ, ಬ್ರೆಝಿಲ್, ಯುಕ್ರೇನ್, ಇಥಿಯೋಪಿಯ, ದಕ್ಷಿಣ ಆಫ್ರಿಕ, ಮೆಕ್ಸಿಕೊ ಮತ್ತು ಟರ್ಕಿ ದೇಶಗಳಿಗೆ ಪ್ರಯಾಣಿಸಲು ಇಸ್ರೇಲಿಗರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯ ಜಂಟಿಯಾಗಿ ಹೊರಡಿಸಿರುವ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.

ನಿಷೇಧವು ಮೇ 3ರಿಂದ ಜಾರಿಗೆ ಬರಲಿದೆ ಹಾಗೂ ಮೇ 16ರವರೆಗೆ ಜಾರಿಯಲ್ಲಿರುತ್ತದೆ.

ಆದರೆ, ಇಸ್ರೇಲ್ ಪ್ರಜೆಗಳಲ್ಲದವರು ಈ ದೇಶಗಳಿಗೆ ಪ್ರಯಾಣಿಸಬಹುದಾಗಿದೆ. ಆದರೆ, ಅವರು ವಾಪಸ್ ಬರುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News