ದೋಣಿಗಳ ನಡುವೆ ಢಿಕ್ಕಿ; 25 ಸಾವು

Update: 2021-05-03 17:59 GMT
ಫೋಟೊ ಕೃಪೆ: //twitter.com/Metricsafrica

ಢಾಕಾ (ಬಾಂಗ್ಲಾದೇಶ), ಮೇ 3: ಮಧ್ಯ ಬಾಂಗ್ಲಾದೇಶದಲ್ಲಿ ಸೋಮವಾರ ಎರಡು ದೋಣಿಗಳು ಪರಸ್ಪರ ಢಿಕ್ಕಿ ಹೊಡೆದು ಕನಿಷ್ಠ 25 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಐವರನ್ನು ರಕ್ಷಿಸಿದ್ದೇವೆ ಹಾಗೂ 25 ಮೃತದೇಹಗಳನ್ನು ಹೊರದೆಗೆಯಲಾಗಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮಿರಾಝ್ ಹುಸೈನ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಶಿಬ್‌ಚಾರ್ ಪಟ್ಟಣದ ಸಮೀಪ ಪದ್ಮ ನದಿಯಲ್ಲಿ ಕನಿಷ್ಠ 30 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಒಂದು ಪ್ರಯಾಣಿಕ ದೋಣಿ ಮತ್ತು ಮರಳು ಸಾಗಿಸುತ್ತಿದ್ದ ಇನ್ನೊಂದು ದೋಣಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದಾಗ ಈ ದುರಂತ ಸಂಭವಿಸಿದೆ.

ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಇನ್ನೋರ್ವ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News