ಚೀನಾ ಕಂಪೆನಿಗೆ 99 ವರ್ಷಗಳ ಲೀಸ್‌ನಲ್ಲಿ ಬಂದರು: ಮರುಪರಿಶೀಲನೆಗೆ ಮುಂದಾದ ಆಸ್ಟ್ರೇಲಿಯ

Update: 2021-05-03 18:04 GMT

ಸಿಡ್ನಿ (ಆಸ್ಟ್ರೇಲಿಯ), ಮೇ 3: ಆಸ್ಟ್ರೇಲಿಯದ ಉತ್ತರ ಭಾಗದಲ್ಲಿರುವ ವಾಣಿಜ್ಯ ಹಾಗೂ ಸೇನಾ ಬಂದರೊಂದನ್ನು 99 ವರ್ಷಗಳ ಅವಧಿಗೆ ಚೀನಾಕ್ಕೆ ನೀಡುವ ಒಪ್ಪಂದವನ್ನು ಆಸ್ಟ್ರೇಲಿಯ ಮರುಪರಿಶೀಲಿಸಲಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ರವಿವಾರ ವರದಿ ಮಾಡಿದೆ. ಇದು ಚೀನಾ ಮತ್ತು ಆಸ್ಟ್ರೇಲಿಯಗಳ ನಡುವೆ ಈಗಾಗಲೇ ಇರುವ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.

ಪ್ರಸಕ್ತ, ನಾರ್ದರ್ನ್ ಟೆರಿಟರಿ ರಾಜಧಾನಿ ಡಾರ್ವಿನ್‌ನಲ್ಲಿರುವ ಬಂದರಿನ ಒಡೆತನವನ್ನು ಚೀನಾದ ಬಿಲಿಯಾಧೀಶ ಯೆ ಚೆಂಗ್ ಒಡೆತನದ ಲ್ಯಾಂಡ್‌ಬ್ರಿಜ್ ಗ್ರೂಪ್ ಹೊಂದಿದೆ.

ಭದ್ರತಾ ಕಾರಣಗಳಿಗಾಗಿ ಈ ಬಂದರಿನ ಒಡೆತನವನ್ನು ಬಿಟ್ಟುಕೊಡುವಂತೆ ಲ್ಯಾಂಡ್‌ಬ್ರಿಜ್ ಕಂಪೆನಿಗೆ ಸೂಚನೆ ನೀಡಬಹುದೇ ಎನ್ನುವುದನ್ನು ರಕ್ಷಣಾ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಈ ಲೀಸ್‌ಗೆ ಸಂಬಂಧಿಸಿ ಅಭಿಪ್ರಾಯ ತಿಳಿಸಿ ಎಂಬುದಾಗಿ ಆಸ್ಟ್ರೇಲಿಯದ ರಾಷ್ಟ್ರೀಯ ಭದ್ರತಾ ಸಮಿತಿ ರಕ್ಷಣಾ ಸಚಿವಾಲಯವನ್ನು ಕೋರಿದೆ. ಹಾಗಾಗಿ, ಈಗ ಮರುಪರಿಶೀಲನೆ ಪ್ರಗತಿಯಲ್ಲಿದೆ ಎಂದು ರಕ್ಷಣಾ ಸಚಿವ ಪೀಟರ್ ಡಟ್ಟಾನ್ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News