ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಗುಂಡು ಹಾರಾಟ: ಮಹಿಳೆ ಸಾವು; ಇಬ್ಬರಿಗೆ ಗಾಯ

Update: 2021-05-03 18:07 GMT

ರಮಲ್ಲಾ (ಫೆಲೆಸ್ತೀನ್), ಮೇ 3: ಫೆಲೆಸ್ತೀನ್‌ನಲ್ಲಿರುವ, ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರವಿವಾರ ನಡೆದ ಎರಡು ಗುಂಡು ಹಾರಾಟದ ಘಟನೆಗಳಲ್ಲಿ ಓರ್ವ ಫೆಲೆಸ್ತೀನ್ ಮಹಿಳೆ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಇಸ್ರೇಲೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಮತ್ತು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಚೂರಿ ದಾಳಿ ನಡೆಸಲು ಓರ್ವ ಫೆಲೆಸ್ತೀನ್ ಮಹಿಳೆ ಮುಂದಾದಾಗ ಇಸ್ರೇಲ್ ಸೈನಿಕನೊಬ್ಬ ಗುಂಡು ಹಾರಿಸಿದರು ಎಂದು ಇಸ್ರೇಲ್ ಸೇನೆ ಹೇಳಿದೆ. 60 ವರ್ಷದ ಮಹಿಳೆ ಗುಂಡಿನ ಗಾಯದಿಂದ ಮೃತಪಟ್ಟರು ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಬಳಿಕ ಫೆಲೆಸ್ತೀನ್ ಬಂದೂಕುಧಾರಿಗಳು ಜನನಿಬಿಡ ಚೌಕವೊಂದರಲ್ಲಿ ಗುಂಡು ಹಾರಿಸಿದಾಗ ಇಬ್ಬರು ಇಸ್ರೇಲಿಗರು ಗಂಭೀರವಾಗಿ ಗಾಯಗೊಂಡರು. ಕಾರಿನಲ್ಲಿ ಪರಾರಿಯಾದ ಬಂದೂಕುಧಾರಿಗಳಿಗಾಗಿ ಇಸ್ರೇಲ್ ಸೈನಿಕರು ಶೋಧ ನಡೆಸುತ್ತಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಪ್ರಸಿದ್ಧ ಜನಸಂಪರ್ಕ ತಾಣವೊಂದಕ್ಕೆ ಪ್ರವೇಶ ನಿರಾಕರಿಸಿರುವುದನ್ನು ಫೆಲೆಸ್ತೀನೀಯರು ಈಗಾಗಲೇ ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಪಶ್ಚಿಮ ದಂಡೆಗೆ ಹೆಚ್ಚುವರಿ ಪಡೆಗಳನ್ನು ಕಳುಹಿಸುವುದಾಗಿ ಇಸ್ರೇಲ್ ಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News