ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ನಗರಗಳು ವಿಫಲ: ಕೋಟ್ಯಂತರ ಮಂದಿ ಅಪಾಯದಲ್ಲಿ

Update: 2021-05-12 17:46 GMT

ಪ್ಯಾರಿಸ್ (ಫ್ರಾನ್ಸ್), ಮೇ 12: ಪ್ರವಾಹಗಳು, ಉಷ್ಣಮಾರುತಗಳು ಮತ್ತು ಮಾಲಿನ್ಯ ಮುಂತಾದ ಬೆದರಿಕೆಗಳು ಹೆಚ್ಚುತ್ತಿದ್ದರೂ, ನೂರಾರು ನಗರಗಳು ಬದಲಾದ ಹವಾಮಾನಕ್ಕೆ ಹೊಂದಿಕೊಳ್ಳುವ ಯೋಜನೆಗಳನ್ನು ಇನ್ನು ರೂಪಿಸಿಲ್ಲ ಎಂದು ಪರಿಸರ ಸಂಘಟನೆಯ ವರದಿಯೊಂದು ಬುಧವಾರ ತಿಳಿಸಿದೆ. ಪ್ರಸಕ್ತ ಹವಾಮಾನ ಬದಲಾವಣೆಯು ಜಗತ್ತಿನಾದ್ಯಂತ 40 ಕೋಟಿಗೂ ಅಧಿಕ ಜನರನ್ನು ಅಪಾಯಕ್ಕೆ ಗುರಿಪಡಿಸಲಿದೆ.

ನಗರ ಪ್ರದೇಶಗಳು ವೇಗವಾಗಿ ವಿಸ್ತರಿಸುತ್ತಿದ್ದು, ಭೂಮಿಯ ಅರ್ಧಕ್ಕೂ ಹೆಚ್ಚಿನ ಜನರಿಗೆ ನೆಲೆಯಾಗಿದೆ. ಆದರೆ ಜಗತ್ತು ಬಿಸಿಯಾಗುತ್ತಿರುವಂತೆಯೇ ಪರಿಸರ ಸಂಬಂಧಿ ವಿಪತ್ತುಗಳು, ಆರ್ಥಿಕ ಆಘಾತಗಳು ಮತ್ತು ಆರೋಗ್ಯ ಬಿಕ್ಕಟ್ಟುಗಳ ಪರಿಣಾಮಗಳಿಗೆ ಅವರು ಹೆಚ್ಚೆಚ್ಚು ಒಳಗಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ದುರ್ಬಲ ಸಮುದಾಯಗಳು ಅತಿ ಹೆಚ್ಚಿನ ಆಘಾತಗಳಿಗೆ ಒಳಗಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಪರಿಸರ ಪರಿಣಾಮಗಳಿಗೆ ಸಂಬಂಧಿಸಿ ಕಂಪೆನಿಗಳು, ನಗರಗಳು ಮತ್ತು ಸರಕಾರಗಲು ಹೊರಡಿಸುವ ಅಂಕಿಅಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ಜಾಗತಿಕ ಲಾಭರಹಿತ ಸಂಸ್ಥೆ ಸಿಡಿಪಿ ಈ ಅಂಶಗಳನ್ನು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ. ಅದು 800ಕ್ಕೂ ಅಧಿಕ ನಗರಗಳ ಅಂಕಿಅಂಶಗಳನ್ನು ವಿಶ್ಲೇಷಿಸಿದೆ ಹಾಗೂ ಈ ಪೈಕಿ 43 ಶೇಕಡಕ್ಕೂ ಅಧಿಕ ನಗರಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವ ಯೋಜನೆಗಳನ್ನು ಇನ್ನೂ ರೂಪಿಸಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News