ಒತ್ತೆ ಹಣಕ್ಕಾಗಿ ದಾಳಿ: ಕಂಪ್ಯೂಟರ್ ಜಾಲ ಮುಚ್ಚಿದ ಐರ್ಲ್ಯಾಂಡ್ ಆರೋಗ್ಯ ಇಲಾಖೆ

Update: 2021-05-14 18:25 GMT

ಡಬ್ಲಿನ್ (ಐರ್ಲ್ಯಾಂಡ್), ಮೇ 14: ಹಣ ಪೀಕಿಸುವ ಉದ್ದೇಶದ (ರ್ಯಾನ್ಸಮ್ವೇರ್) ಸೈಬರ್ ದಾಳಿ ಅನುಭವಕ್ಕೆ ಬಂದ ಬಳಿಕ, ತನ್ನ ಕಂಪ್ಯೂಟರ್ ಜಾಲವನ್ನು ಮುಚ್ಚಿರುವುದಾಗಿ ಐರ್ಲ್ಯಾಂಡ್ನ ಆರೋಗ್ಯ ಪ್ರಾಧಿಕಾರ ಶುಕ್ರವಾರ ಹೇಳಿದೆ.

‌ಈ ಸೈಬರ್ ದಾಳಿಯಿಂದ ರಕ್ಷಿಸಿಕೊಳ್ಳಲು ಹಾಗೂ ನಮ್ಮ ಸುರಕ್ಷಾ ಸಂಸ್ಥೆಗಳಿಗೆ ಪರಿಸ್ಥಿತಿಯ ಅಧ್ಯಯನ ನಡೆಸಲು ಅನುವು ಮಾಡಿಕೊಡಲು ಮುಂಜಾಗರೂಕತಾ ಕ್ರಮವಾಗಿ ನಮ್ಮ ಎಲ್ಲ ಮಾಹಿತಿ ತಂತ್ರಜ್ಞಾನ ಜಾಲಗಳನ್ನು ಸ್ಥಗಿತಗೊಳಿಸಿದ್ದೇವೆ ಎಂದು ಆರೋಗ್ಯ ಸೇವೆಗಳ ಪ್ರಾಧಿಕಾರ ಟ್ವಿಟರ್ನಲ್ಲಿ ಹೇಳಿದೆ.

ಅಮೆರಿಕದ ಅತಿ ದೊಡ್ಡ ಇಂಧನ ಪೈಪ್ಲೈನ್ ಜಾಲದ ಮೇಲೆ ವಾರದ ಹಿಂದೆ ರ್ಯಾನ್ಸಮ್ವೇರ್ ದಾಳಿ ನಡೆದ ಬಳಿಕ, ಅದರ ಕಾರ್ಯನಿರ್ವಹಣೆ ಈವರೆಗೂ ಸ್ಥಗಿತಗೊಂಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News