ಚೀನಾ ವಿರುದ್ಧ ಆಸ್ಟ್ರೇಲಿಯ ಒಬ್ಬಂಟಿಯಲ್ಲ: ಅಮೆರಿಕ ವಿದೇಶ ಕಾರ್ಯದರ್ಶಿ

Update: 2021-05-14 18:25 GMT

ವಾಶಿಂಗ್ಟನ್, ಚೀನಾದಿಂದ ಆರ್ಥಿಕ ಪ್ರತೀಕಾರ ಎದುರಿಸುತ್ತಿರುವ ಆಸ್ಟ್ರೇಲಿಯಕ್ಕೆ ಪೂರ್ಣ ಬೆಂಬಲವನ್ನು ನೀಡುವ ಭರವಸೆಯನ್ನು ಅಮೆರಿಕದ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಗುರುವಾರ ನೀಡಿದ್ದಾರೆ.

ಅಮೆರಿಕ-ಆಸ್ಟ್ರೇಲಿಯ ಮೈತ್ರಿಯ 70ನೇ ವಾರ್ಷಿಕ ದಿನದ ಸಂದರ್ಭದಲ್ಲಿ ಆಸ್ಟ್ರೇಲಿಯದ ವಿದೇಶ ಸಚಿವೆ ಮಾರಿಸ್ ಪೇನ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಚೀನಾದಿಂದ ಆರ್ಥಿಕ ಪ್ರತೀಕಾರವನ್ನು ಎದುರಿಸುತ್ತಿರುವ ಆಸ್ಟ್ರೇಲಿಯವನ್ನು ಒಬ್ಬಂಟಿಯಾಗಿ ಬಿಡುವುದಿಲ್ಲ ಎನ್ನುವುದನ್ನು ನಾನು ಪುನರುಚ್ಚರಿಸುತ್ತೇನೆ. ಇದು ಮಿತ್ರರು ಮಾಡುವ ಕೆಲಸ ಎಂದು ಅವರು ಹೇಳಿದರು.

ಹಲವಾರು ವಿಷಯಗಳಿಗೆ ಸಂಬಂಧಿಸಿ ಚೀನಾ ಮತ್ತು ಆಸ್ಟ್ರೇಲಿಯ ನಡುವಿನ ಉದ್ವಿಗ್ನತೆ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ. ಆದರೆ, ತೈವಾನ್ ವಿಷಯದಲ್ಲಿ ಆಸ್ಟ್ರೇಲಿಯವು ಸಂಭಾವ್ಯ ಸೇನಾ ಸಂಘರ್ಷದಲ್ಲಿ ತೊಡಗಿದರೆ ಅದರ ವಿರುದ್ಧ ಕ್ಷಿಪಣಿಗಳನ್ನು ಹಾರಿಸಲಾಗುವುದು ಎಂಬುದಾಗಿ ಚೀನಾದ ಸರಕಾರಿ ಮಾಧ್ಯಮಗಳು ಎಚ್ಚರಿಸಿದ ಬಳಿಕ ಉದ್ವಿಗ್ನತೆ ಪರಾಕಾಷ್ಠೆಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News