×
Ad

ಗಾಝಾದಲ್ಲಿರುವ ಖತರಿ ರೆಡ್ ಕ್ರೆಸೆಂಟ್ ಸೊಸೈಟಿಯ ಕಚೇರಿ ಮೇಲೆ ಇಸ್ರೇಲ್ ದಾಳಿ

Update: 2021-05-18 23:38 IST

ರಮಲ್ಲಾ (ಫೆಲೆಸ್ತೀನ್), ಮೇ 18: ಫೆಲೆಸ್ತೀನ್‌ನ ಗಾಝಾ ನಗರದಲ್ಲಿರುವ ಖತರಿ ರೆಡ್ ಕ್ರೆಸೆಂಟ್ ಸೊಸೈಟಿಯ ಕಚೇರಿ ಮೇಲೆ ಇಸ್ರೇಲ್ ಯುದ್ಧವಿಮಾನವೊಂದು ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಹಾಗೂ 10 ಮಂದಿ ಗಾಯಗೊಂಡಿದ್ದಾರೆ.

ಇಸ್ರೇಲ್‌ನ ಅತಿಕ್ರಮಣಕಾರಿ ಶಕ್ತಿಗಳು ನಮ್ಮ ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆಸಿವೆ ಎಂದು ಸೊಸೈಟಿ ಟ್ವೀಟ್ ಮಾಡಿದೆ.

ಗಾಝಾದಲ್ಲಿರುವ ತನ್ನ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ನಡೆಸಿರುವ ದಾಳಿಯನ್ನು ಖತರ್ ರೆಡ್ ಕ್ರೆಸೆಂಟ್ ಖಂಡಿಸುತ್ತದೆ ಹಾಗೂ ಅಂತರ್‌ರಾಷ್ಟ್ರೀಯ ಮಾನವೀಯತೆ ಕಾನೂನುಗಳ ಅಡಿಯಲ್ಲಿ ಕೆಲಸ ಮಾಡಲು ಪರಿಹಾರ ತಂಡಗಳಿಗೆ ಅವಕಾಶ ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತದೆ ಎಂದು ಅದು ಹೇಳಿದೆ.

ದಾಳಿಯು ಜಿನೀವ ಒಪ್ಪಂದದ ಸಾರಾಸಗಟು ಉಲ್ಲಂಘನೆಯಾಗಿದೆ ಎಂದು ಸೊಸೈಟಿಯ ಮಹಾಕಾರ್ಯದರ್ಶಿ ಅಲಿ ಬಿನ್ ಹಸನ್ ಅಲ್-ಹಮ್ಮಾದಿ ಹೇಳಿದ್ದಾರೆ. ಈ ಜಿನೀವ ಒಪ್ಪಂದಕ್ಕೆ ಇಸ್ರೇಲ್ ಸಹಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News