×
Ad

ಕೆನಡ: ಭಾರತದ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧ ಇನ್ನೂ 30 ದಿನ ವಿಸ್ತರಣೆ

Update: 2021-05-22 23:27 IST

ಒಟ್ಟಾವ (ಕೆನಡ), ಮೇ 22: ಕೊರೋನ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ, ಭಾರತ ಮತ್ತು ಪಾಕಿಸ್ತಾನಗಳಿಂದ ಬರುವ ಪ್ರಯಾಣಿಕ ವಿಮಾನಗಳ ಮೇಲೆ ಹೇರಲಾಗಿರುವ ನಿಷೇಧವನ್ನು ಕೆನಡ ಇನ್ನೂ 30 ದಿನಗಳವರೆಗೆ ವಿಸ್ತರಿಸಿದೆ ಎಂದು ದೇಶದ ಸಾರಿಗೆ ಸಚಿವ ಉಮರ್ ಅಲ್ಗಾಬ್ರ ಶುಕ್ರವಾರ ತಿಳಿಸಿದ್ದಾರೆ. ನಿಷೇಧವು ಇನ್ನು ಜೂನ್ 21ರವರೆಗ ಜಾರಿಯಲ್ಲಿರುತ್ತದೆ.

ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರುತ್ತಿದ್ದಂತೆಯೇ, ಕೆನಡವು ಎಪ್ರಿಲ್ 22ರಂದು ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳನ್ನು ನಿಷೇಧಿಸಿತ್ತು. ಹಾಗಾಗಿ, ವಿಮಾನಗಳಲ್ಲಿ ಬರುವ ಪ್ರಯಾಣಿಕರ ಮೂಲಕ ಹರಡಬಹುದಾಗಿದ್ದ ಕೊರೋನ ವೈರಸ್ ಪ್ರಕರಣಗಳು ಕೆನಡದಲ್ಲಿ ‘ಗಮನಾರ್ಹ ಪ್ರಮಾಣದಲ್ಲಿ ತಗ್ಗಿವೆ’ ಎಂದು ಅಲ್ಗಾಬ್ರ ತಿಳಿಸಿದರು. ನಿಷೇಧವು ಸರಕು ವಿಮಾನಗಳಿಗೆ ಅನ್ವಯಿಸುವುದಿಲ್ಲ.

‘‘ಕೆನಡಿಯನ್ನರನ್ನು ರಕ್ಷಿಸಲು ಹಾಗೂ ವಿದೇಶಗಳಿಂದ ಬರುವ ಕೋವಿಡ್-19 ಸೋಂಕು ಪ್ರಕರಣಗಳನ್ನು ತಡೆಯಲು ಈ ಕ್ರಮಗಳು ಜಾರಿಯಲ್ಲಿರುತ್ತವೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News