×
Ad

ಇಟಲಿ: ಕೇಬಲ್ ಕಾರ್ ಪರ್ವತಕ್ಕೆ ಅಪ್ಪಳಿಸಿ 13 ಸಾವು

Update: 2021-05-23 23:53 IST

ರೋಮ್ (ಇಟಲಿ), ಮೇ 23: ಉತ್ತರ ಇಟಲಿಯ ಪರ್ವತವೊಂದರಲ್ಲಿ ಕೇಬಲ್ ಕಾರ್ ಪರ್ವತದ ಒಂದು ಬದಿಗೆ ಅಪ್ಪಳಿಸಿದಾಗ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆ ಇಲಾಖೆಯ ಮೂಲಗಳು ತಿಳಿಸಿವೆ.

ಇಟಲಿಯ ಪೈಡ್ಮೊಂಟ್ ವಲಯದಲ್ಲಿರುವ ಮೆಗೋಯರ್ ಸರೋವರದ ದಂಡೆಯಲ್ಲಿರುವ ರಿಸಾರ್ಟ್ ಪಟ್ಟಣ ಸ್ಟ್ರೆಸದಲ್ಲಿ ಅಪಘಾತ ಸಂಭವಿಸಿದೆ ಎಂದು ಆಲ್ಪೈನ್ ರಕ್ಷಣಾ ಸೇವೆಯು ಟ್ವಿಟರ್ನಲ್ಲಿ ತಿಳಿಸಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಅದು ಹೇಳಿದೆ.
ಸ್ಟ್ರೆಸ ನಗರವನ್ನು 1,500 ಮೀಟರ್ ಉದ್ದದ ಕೇಬಲ್ ಕಾರ್ ಮೂಲಕ ಮೊಟರೋನ್ ಪರ್ವತದ ತುದಿಗೆ ಜೋಡಿಸಲಾಗಿದೆ. ಪರ್ವತದ ತುದಿಯ ಸಮೀಪದಲ್ಲಿ ಸವೆದ ಕೇಬಲ್ ತುಂಡಾಗಿ ರವಿವಾರ ಮಧ್ಯಾಹ್ನ ಸುಮಾರು 12:30ಕ್ಕೆ ಅಪಘಾತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News