1958ರಲ್ಲಿ ಅಮೆರಿಕ ಚೀನಾ ಮೇಲೆ ಪರಮಾಣು ದಾಳಿಗೆ ಮುಂದಾಗಿತ್ತು: ರಹಸ್ಯ ಮುಕ್ತ ದಾಖಲೆಯಿಂದ ಬಹಿರಂಗ

Update: 2021-05-23 18:24 GMT

ವಾಶಿಂಗ್ಟನ್, ಮೇ 23: ತೈವಾನನ್ನು ಚೀನಾದ ಆಕ್ರಮಣದಿಂದ ತಪ್ಪಿಸುವುದಕ್ಕಾಗಿ 1958ರಲ್ಲಿ ಅಮೆರಿಕದ ಸೇನಾ ಯೋಜನೆಗಾರರು ಚೀನಾದ ಮೇಲೆ ಪರಮಾಣು ದಾಳಿ ನಡೆಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು ಎಂದು ರಹಸ್ಯ ಮುಕ್ತಗೊಂಡಿರುವ ದಾಖಲೆಗಳು ತಿಳಿಸಿವೆ.

ಒಂದು ವೇಳೆ ಅಮೆರಿಕವು ಚೀನಾದ ಮೇಲೆ ಪರಮಾಣು ದಾಳಿ ನಡೆಸಿದರೆ, ಸೋವಿಯತ್ ಒಕ್ಕೂಟವು ಚೀನಾದ ನೆರವಿಗೆ ಧಾವಿಸುವುದು ಹಾಗೂ ಅಮೆರಿಕದ ವಿರುದ್ಧ ಪರಮಾಣು ದಾಳಿ ನಡೆಸುವುದು ಎಂಬುದನ್ನೂ ಅಮೆರಿಕದ ಯೋಜನೆಗಾರರು ಊಹಿಸಿದ್ದರು. ತೈವಾನನ್ನು ರಕ್ಷಿಸುವುದಕ್ಕಾಗಿ ಈ ಅಪಾಯಕ್ಕೆ ತಲೆಯೊಡ್ಡಲು ಅಮೆರಿಕ ಮುಂದಾಗಿತ್ತು ಎಂದು ಪೆಂಟಗಾನ್ ಪೇಪರ್ಸ್ ಕಾರ್ಯಕ್ರಮದ ಖ್ಯಾತಿಯ ಡೇನಿಯಲ್ ಎಲ್ಸ್ಬರ್ಗ್ ಆನ್ ಲೈನ್‌ ನಲ್ಲಿ ಹಾಕಿದ ದಾಖಲೆಗಳು ಹೇಳಿವೆ.

ಈ ಬಿಕ್ಕಟ್ಟಿಗೆ ಸಂಬಂಧಿಸಿದ ಅತ್ಯುನ್ನತ ರಹಸ್ಯ ದಾಖಲೆಯನ್ನು ಈಗ 90 ವರ್ಷ ಪ್ರಾಯದ ಮಾಜಿ ರಕ್ಷಣಾ ವಿಶ್ಲೇಷಕ ಎಲ್ಸ್ಬರ್ಗ್ ಬಹಿರಂಗಗೊಳಿಸಿದ್ದಾರೆ. ಈ ದಾಖಲೆಯನ್ನು 1975ರಲ್ಲಿ ಆಂಶಿಕವಾಗಿ ರಹಸ್ಯಮುಕ್ತಗೊಳಿಸಲಾಗಿತ್ತು.
 
ವಿಯೆಟ್ನಾಮ್ ಯುದ್ಧ ಕುರಿತ ಪೆಂಟಗನ್ ನ ಅತಿರಹಸ್ಯ ಅಧ್ಯಯನ ವರದಿಯೊಂದನ್ನು ಎಲ್ಸ್ಬರ್ಗ್ 1971ರಲ್ಲಿ ಅಮೆರಿಕದ ಮಾಧ್ಯಮಗಳಿಗೆ ಸೋರಿಕೆ ಮಾಡಿ ಪ್ರಸಿದ್ಧರಾಗಿದ್ದರು. ಆ ಸೋರಿಕೆಯು ಪೆಂಟಗನ್ ಪೇಪರ್ಸ್ಎಂಬುದಾಗಿ ಪ್ರಸಿದ್ಧವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News