ಚೀನಾದ ಲ್ಯಾಬ್ ನಲ್ಲಿ ಕೋವಿಡ್19 ವೈರಸ್ ಸೃಷ್ಟಿ !: ಬ್ರಿಟನ್, ನಾರ್ವೆ ವಿಜ್ಞಾನಿಗಳ ಅಧ್ಯಯನ ವರದಿ

Update: 2021-05-30 17:56 GMT

ಲಂಡನ್, ಮೇ 30: ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ ಮೂಲದ ಬಗ್ಗೆ ಹೊಸತಾಗಿ ತನಿಖೆಯಾಗಬೇಕೆಂಬ ಕೂಗು ಕೇಳಿಬರುತ್ತಿರುವಂತೆಯೇ, ಈ ಮಾರಣಾಂತಿಕ ವೈರಸನ್ನು ಚೀನಿ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದಾರೆಂದು ಹೊಸ ಅಧ್ಯಯನ ವರದಿಯೊಂದು ಪ್ರತಿಪಾದಿಸಿದೆ. 

ಕೊರೋನ ವೈರಸ್ ಅನ್ನು ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರುವುದನ್ನು ಬಚ್ಚಿಡುವ ಉದ್ದೇಶದಿಂದ ಚೀನಿ ವಿಜ್ಞಾನಿಗಳು ಬಾವಲಿಗಳಿಂದ ಸಹಜವಾಗಿ ಹುಟ್ಟಿಕೊಂಡಿತೆಂಬಂತೆ ತೋರಿಸಲು ಅದನ್ನು ರೂಪಾಂತರಗೊಳಿಸಿದ್ದರೆಂದು ಅದು ಆಪಾದಿಸಿದೆ.

ಕೋವಿಡ್-19 ಸೋಂಕನ್ನು ಹರಡುತ್ತಿರುವ ನೊವೆಲ್ ಕೊರೋನ ವೈರಸ್ (ಸಾರ್ಸ್-ಕೋವ್-2)ಗೆ ಯಾವುದೇ ವಿಶ್ವಸನೀಯವಾದ ಪ್ರಾಕೃತಿಕ ಪೂರ್ವಜನಿಲ್ಲ ಹಾಗೂ ಅದು ವುಹಾನ್ ನ ಪ್ರಯೋಗಾಲಯದಲ್ಲಿ ‘ಗೈನ್ ಆಫ್ ಫಂಕ್ಷನ್’ ಪ್ರಾಜೆಕ್ಟ್ ನಡಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳಿಂದ ಸೃಷ್ಟಿಯಾಗಿದೆ ಎಂದು ಬ್ರಿಟಿಶ್ ಪ್ರೊಫೆಸರ್ ಆ್ಯಂಗಸ್ ಡ್ಯಾಲ್ಗ್ಲೆಯಿಶ್ ಹಾಗೂ ನಾರ್ವೆ ವಿಜ್ಞಾನಿ ಡಾ ಬಿರ್ಗರ್ ಸೊರೆನ್ಸನ್ ಅವರ ನೂತನ ಸಂಶೋಧನಾ ವರದಿ ಪ್ರತಿಪಾದಿಸಿರುವುದಾಗಿ ಬ್ರಿಟನ್‌ ನ ಡೈಲಿ ಮೇಲ್ ಪತ್ರಿಕೆ ರವಿವಾರ ವರದಿ ಮಾಡಿದೆ.

ಚೀನಿ ವಿಜ್ಞಾನಿಗಳು ಚೀನಾದ ಗುಹೆ ಬಾವಲಿಗಳಲ್ಲಿ ಕಂಡುಬರುವ ಪ್ರಾಕೃತಿಕ ಕೊರೋನ ವೈರಸ್‌ನ ಕಣಗಳಿಂದ ಪ್ರಯೋಗಾಲಯದಲ್ಲಿ ಮಾರಣಾಂತಿಕವಾದ ಹಾಗೂ ತೀವ್ರವಾಗಿ ಕೋವಿಡ್19 ರೋಗವನ್ನು ಹರಡಬಲ್ಲ ವೈರಸ್ ಆಗಿ ಮಾರ್ಪಡಿಸಿದ್ದಾರೆಂದು ನೂತನ ಸಂಶೋಧನಾ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News