ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು 2 ವರ್ಷಗಳ ಕಾಲ ಸ್ಥಗಿತಗೊಳಿಸಿದ ಫೇಸ್‌ಬುಕ್

Update: 2021-06-04 18:14 GMT

ನ್ಯೂಯಾರ್ಕ್ : ಭವಿಷ್ಯದಲ್ಲಿ ನಿಯಮ ಮುರಿಯುವ ವಿಶ್ವ ನಾಯಕರನ್ನು ಕಂಪನಿಯು ಹೇಗೆ ಪರಿಗಣಿಸುತ್ತದೆ ಎಂಬುದಕ್ಕೆ ಸಂಕೇತವಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ ಬುಕ್ ಖಾತೆಯನ್ನು  ಕನಿಷ್ಠ 2023 ರ ಜನವರಿ ತನಕ  ಫೇಸ್‌ಬುಕ್ ಇಂಕ್ ಸ್ಥಗಿತಗೊಳಿಸಿದೆ.

ಫೇಸ್ ಬುಕ್ ನ ಸ್ವತಂತ್ರ ಮೇಲ್ವಿಚಾರಣಾ ಮಂಡಳಿಯು ಟ್ರಂಪ್ ಅವರ ಮೇಲಿನ ನಿರ್ಬಂಧವನ್ನು ಮೇ ತಿಂಗಳಲ್ಲಿ ಎತ್ತಿಹಿಡಿದಿತ್ತು.

ಆದಾಗ್ಯೂ, ನಿಷೇಧವನ್ನು ಅನಿರ್ದಿಷ್ಟವಾಗಿಸುವುದು ತಪ್ಪು ಎಂದು ಮಂಡಳಿ ತೀರ್ಪು ನೀಡಿತು ಹಾಗೂ  "ಪ್ರಮಾಣಾನುಗುಣ ಪ್ರತಿಕ್ರಿಯೆ" ಯನ್ನು ನಿರ್ಧರಿಸಲು ಆರು ತಿಂಗಳು ಕಾಲಾವಕಾಶ ನೀಡಿತು.

ಟ್ರಂಪ್ ಅವರ ಅಮಾನತು ಜನವರಿಯಲ್ಲಿ ಆರಂಭವಾಗಿ ದ್ದು,ಷರತ್ತುಗಳು ಅನುಮತಿಸಿದರೆ ಮಾತ್ರ ಅದನ್ನು ಪುನಃ ಸ್ಥಾಪಿಸಲಾಗುವುದು ಎಂದು ಫೇಸ್ಬುಕ್ ಬ್ಲಾಗ್ ಪೋಸ್ಟ್  ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News