ಬ್ರೆಝಿಲ್ ನಲ್ಲಿ 5 ಲಕ್ಷ ದಾಟಿದ ಕೊರೋನ ವೈರಸ್ ಸಾವಿನ ಸಂಖ್ಯೆ: ಪರಿಸ್ಥಿತಿ ಬಿಗಡಾಯಿಸುವ ಅಪಾಯ: ತಜ್ಞರ ಎಚ್ಚರಿಕೆ

Update: 2021-06-20 17:18 GMT

ಸಾವೊ ಪೌಲೋ (ಬ್ರೆಝಿಲ್), ಜೂ. 19: ಬ್ರೆಝಿಲ್ ನಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆ ಶನಿವಾರ 5 ಲಕ್ಷವನ್ನು ದಾಟಿದೆ. ಅದೇ ವೇಳೆ, ಕೊರೋನ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಈಗಾಗಲೇ ಎರಡನೇ ಸ್ಥಾನದಲ್ಲಿರುವ ದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಲಸಿಕೆ ನೀಡುವ ಕಾರ್ಯಕ್ರಮಗಳಲ್ಲಿ ವಿಳಂಬವಾಗುತ್ತಿರುವುದು ಮತ್ತು ಸುರಕ್ಷಿತ ಅಂತರ ಮುಂತಾದ ಕ್ರಮಗಳನ್ನು ಬೆಂಬಲಿಸಲು ಸರಕಾರ ನಿರಾಕರಿಸುತ್ತಿರುವುದು ಸಾಂಕ್ರಾಮಿಕದ ಪರಿಸ್ಥಿತಿ ಉಲ್ಬಣಿಸಲು ಪ್ರಮುಖ ಕಾರಣಗಳಾಗಬಹುದಾಗಿದೆ ಎಂದು ಅವರು ಹೇಳಿದ್ದಾರೆ.


ಬ್ರೆಝಿಲ್ನಲ್ಲಿ ಈವರೆಗೆ ಕೇವಲ 11 ಶೇಕಡ ಮಂದಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ದಕ್ಷಿಣಾರ್ಧ ಗೋಳದಲ್ಲಿ ಚಳಿಗಾಲ ಕಾಲಿಡುತ್ತಿದೆ ಹಾಗೂ ಕೊರೋನ ವೈರಸ್ ನ ಹೊಸ ಪ್ರಭೇದಗಳು ಹೊರಹೊಮ್ಮುತ್ತಿವೆ. ಇಂಥ ಸಂದರ್ಭದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ವೇಗ ಸಿಕ್ಕಿದರೂ ಸಾವಿನ ಸಂಖ್ಯೆಗಣನೀಯ ಪ್ರಮಾಣದಲ್ಲಿ ಹೆಚುತ್ತದೆ ಎಂಬ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News