ಜಾಗತಿಕ ಪ್ರವಾಸೋದ್ಯಮಕ್ಕೆ 4 ಟ್ರಿಲಿಯ ಡಾಲರ್ ನಷ್ಟ: ವಿಶ್ವಸಂಸ್ಥೆ

Update: 2021-06-30 14:32 GMT
photo: twitter/@UN

ಪ್ಯಾರಿಸ್ (ಫ್ರಾನ್ಸ್), ಜೂ. 30: ಕಳೆದ ವರ್ಷ ಕೊರೋನ ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಂದಿನಿಂದ ಜಾಗತಿಕ ಪ್ರವಾಸೋದ್ಯಮ ಕುಸಿತದ ಹಾದಿಯಲ್ಲಿದ್ದು 4 ಟ್ರಿಲಿಯ ಡಾಲರ್‌ಗೂ ಅಧಿಕ ನಷ್ಟಕ್ಕೆ ಗುರಿಯಾಗಿದೆ ಎಂದು ಬುಧವಾರ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಅಭಿವೃದ್ಧಿಶೀಲ ದೇಶಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಇನ್ನೂ ಪ್ರಾಥಮಿಕ ಹಂತದಲ್ಲಿದೆ, ಹಾಗಾಗಿ ಪ್ರವಾಸೋದ್ಯಮ ಅಗಾಧ ನಷ್ಟವನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಎರಡು ಘಟಕಗಳಾದ ವಿಶ್ವ ಪ್ರವಾಸೋದ್ಯಮ ಸಂಸ್ಥೆ (ಯುಎನ್‌ಡಬ್ಲ್ಯುಟಿಒ) ಮತ್ತು ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (ಅಂಕ್ಟಡ್)ಗಳ ಜಂಟಿ ವರದಿ ಹೇಳಿದೆ.

‘‘ಪ್ರವಾಸೋದ್ಯಮವು ಲಕ್ಷಾಂತರ ಜನರ ಜೀವನಾಡಿಯಾಗಿದೆ. ಜನರ ರಕ್ಷಣೆ ಮತ್ತು ಪ್ರವಾಸೋದ್ಯಮದ ಸುರಕ್ಷಿತ ಪುನರಾರಂಭಕ್ಕೆ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡುವುದು ಅಗತ್ಯವಾಗಿದೆ. ಉದ್ಯೋಗಗಳು ಮತ್ತು ಸಂಪನ್ಮೂಲಗಳ ಸೃಷ್ಟಿಗೆ ಇದು ಕಿಲಿಕೈಯಾಗಿದೆ’’ ಎಂದು ಯುಎನ್‌ಡಬ್ಲ್ಯುಟಿಒ ಮಹಾಕಾರ್ಯದರ್ಶಿ ಝುರಬ್ ಪೊಲೊಲಿಕಶ್ವಿಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News