ಮೆಹುಲ್ ಚೋಕ್ಸಿಗೆ ಮಧ್ಯಂತರ ಜಾಮೀನು ನೀಡಿದ ಡೊಮಿನಿಕಾ ಹೈಕೋರ್ಟ್
Update: 2021-07-12 23:06 IST
ಹೊಸದಿಲ್ಲಿ: ಭಾರತದ ಬ್ಯಾಂಕ್ ಗಳಲ್ಲಿ ಕೋಟ್ಯಂತರ ರೂ. ವಂಚಿಸಿ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ವೈದ್ಯಕೀಯ ಕಾರಣಗಳಿಗಾಗಿ ಡೊಮಿನಿಕನ್ ಹೈಕೋರ್ಟ್ ಸೋಮವಾರ ಮಧ್ಯಂತರ ಜಾಮೀನು ನೀಡಿದೆ.
ಚೋಕ್ಸಿ ಈಗ ಆ್ಯಂಟಿಗುವಾ ಹಾಗೂ ಬಾರ್ಬಡೋಸ್ ಗೆ ಪ್ರಯಾಣಿಸಲಿದ್ದಾನೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನಲ್ಲಿ 13,500 ಕೋಟಿ ರೂ.ಗಳ ವಂಚನೆಗೆ ಸಂಬಂಧಿಸಿದಂತೆ 62 ವರ್ಷದ ಚೋಕ್ಸಿ ಭಾರತಕ್ಕೆ ಬೇಕಾಗಿದ್ದಾನೆ.
ಚೋಕ್ಸಿ ಇತ್ತೀಚೆಗೆ ನ್ಯಾಯಾಂಗ ಪರಿಶೀಲನೆ ಕೋರಿ ಡೊಮಿನಿಕಾದ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದ. ಡೊಮಿನಿಕನ್ ನ್ಯಾಯಾಲಯದಿಂದ ಭಾರತಕ್ಕೆ ತಕ್ಷಣ ವಾಪಸಾಗುವುದರಿಂದ ಮಧ್ಯಂತರ ಜಾಮೀನು ಪಡೆದಿದ್ದ.