ರ‍್ಯಾಪ್ ಸಂಗೀತಗಾರ ಬಿಝ್ ಮಾರ್ಕೀ ನಿಧನ

Update: 2021-07-17 18:10 GMT

ನ್ಯೂಯಾರ್ಕ್, ಜು.17: ‘ಜಸ್ಟ್ ಎ ಫ್ರೆಂಡ್’ ಆಲ್ಬಂ ಮೂಲಕ ಜನಪ್ರಿಯಗೊಂಡಿದ್ದ ಅಮೆರಿಕದ ರ‍್ಯಾಪ್ ಸಂಗೀತಗಾರ , ಡಿಜೆ ಮತ್ತು ನಿರ್ಮಾಪಕ ಬಿಝ್ ಮಾರ್ಕೀ ನಿಧನರಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ‌

ಬಿಝ್ ಮಾರ್ಕೀಯ ನಿಜನಾಮಧೇಯ ಮಾರ್ಸೆಲ್ ಹಾಲ್ ಎಂದಾಗಿದ್ದರೂ, ಇವರನ್ನು ‘ಹಿಪ್-ಹಾಪ್ನ ವಿದೂಷಕ ರಾಜಕುಮಾರ’ ಎಂದು ಅಭಿಮಾನಿಗಳು ಕರೆಯುತ್ತಿದ್ದರಯ. ಪಿಕಿನ್ ಬೂಗರ್ಸ್, ಲೆಟ್ ಗೊ ಮೈ ಎಗೋ, ಚೈನೀಸ್ ಫುಡ್ ಮುಂತಾದ ಹಲವು ಹಾಡುಗಳು ಜನಪ್ರಿಯವಾಗಿದ್ದವು. 

ಜಸ್ಟ್ ಎ ಫ್ರೆಂಡ್ ಹಾಡು ಬಿಲ್ ಬೋರ್ಡ್‌ ನ ಜನಪ್ರಿಯ 100 ಹಾಡುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿತ್ತು ಮತ್ತು ಸಾರ್ವಕಾಲಿಕ ಮಹಾನ್ 100 ಹಿಪ್ಹಾಪ್ ಹಾಡುಗಳ ಪಟ್ಟಿಯಲ್ಲಿ ಸೇರಿದೆ. 57 ವರ್ಷದ ಮಾರ್ಕಿ ಇತ್ತೀಚಿನ ವರ್ಷಗಳಲ್ಲಿ 2ನೇ ಹಂತದ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಸಾವಿಗೆ ನಿಖರ ಕಾರಣ ದೃಢಪಟ್ಟಿಲ್ಲ ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News