ಪರಮಾಣು ಮಾತುಕತೆ ಬಿಕ್ಕಟ್ಟಿನ ಹೊಣೆ ವರ್ಗಾಯಿಸಿಲು ಇರಾನ್ ಯತ್ನ: ಅಮೆರಿಕ ಆರೋಪ

Update: 2021-07-18 17:43 GMT

ವಾಶಿಂಗ್ಟನ್, ಜು. 18: ಇರಾನ್ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹೊಣೆಯನ್ನು ಬೇರೆಯವರ ಮೇಲೆ ಹೊರಿಸಲು ಇರಾನ್ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅಮೆರಿಕ ಶನಿವಾರ ಆರೋಪಿಸಿದೆ. ಅದೇ ವೇಳೆ, ಕೈದಿಗಳ ವಿನಿಮಯಕ್ಕೆ ಒಪ್ಪಂದ ನಡೆದಿದೆ ಎಂಬ ವರದಿಗಳನ್ನು ಅದು ನಿರಾಕರಿಸಿದೆ.

ವಿಯೆನ್ನಾದಲ್ಲಿ ನಡೆಯುತ್ತಿರುವ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳ ಮುಂದಿನ ಸುತ್ತು ಇರಾನ್ನ ಹೊಸ ಸರಕಾರ ಆಗಸ್ಟ್ನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯಬಹುದಾಗಿದೆ ಎಂದು ಇರಾನ್ನ ಮುಖ್ಯ ಸಂಧಾನಕಾರ ಅಬ್ಬಾಸ್ ಅರಕ್ಚಿ ಟ್ವಿಟರ್ನಲ್ಲಿ ಹೇಳಿದ್ದರು. ಆದರೆ ಕೈದಿಗಳ ವಿನಿಮಯಕ್ಕೂ ಪರಮಾಣು ಒಪ್ಪಂದಕ್ಕೂ ನಂಟು ಕಲ್ಪಸುವುದನ್ನು ಅಮೆರಿಕ ಮತ್ತು ಬ್ರಿಟನ್ಗಳು ನಿಲ್ಲಿಸಿದರೆ ಕೈದಿಗಳ ವಿನಿಮಯ ಕ್ಷಿಪ್ರವಾಗಿ ಕಾರ್ಯರೂಪಕ್ಕೆ ಬರಬಹುದಾಗಿದೆ ಎಂದಿದ್ದರು.

2015ರ ಇರಾನ್ ಪರಮಾಣು ಒಪ್ಪಂದಕ್ಕೆ ಮರುಜೀವ ನೀಡುವುದಕ್ಕೆ ಸಂಬಂಧಿಸಿದ ಹಿಂದಿನ ಸುತ್ತಿನ ಮಾತುಕತೆ ಜೂನ್ 20ರಂದು ನಡೆದಿತ್ತು. ಆ ಬಳಿಕ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿದೆ.

ನಿಯೋಜಿತ ಅಧ್ಯಕ್ಷ ಇಬ್ರಾಹೀಮ್ ರೈಸಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಇರಾನ್ ಮಾತುಕತೆಯ ಮೇಜಿಗೆ ಮರಳುವುದಿಲ್ಲ ಎಂಬುದಾಗಿ ಅರಾಕ್ಚಿ ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News