ಕೆನ್ಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ: ಕನಿಷ್ಟ 13 ಸಾವು, ಹಲವರಿಗೆ ಗಾಯ

Update: 2021-07-18 18:06 GMT

ನೈರೋಬಿ, ಜು.18: ಕೆನ್ಯಾದ ಪಶ್ಚಿಮ ಪ್ರಾಂತ್ಯದ ಮಲಂಗಾ ಎಂಬಲ್ಲಿ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಟ 13 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

 ಕಿಸುಮು ನಗರದಿಂದ ಉಗಾಂಡದ ಗಡಿಭಾಗಕ್ಕೆ ತೆರಳುವ ನಿಬಿಡ ವಾಹನಸಂಚಾರವಿರುವ ಹೆದ್ದಾರಿಯಲ್ಲಿ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಮಗುಚಿಬಿದ್ದಿದೆ. ಆಗ ಸ್ಥಳೀಯರು ಟ್ಯಾಂಕರ್ನಿಂದ ತೈಲ ಸಂಗ್ರಹಿಸಲು ಮುಗಿಬಿದ್ದಿದ್ದು ಈ ವೇಳೆ ಟ್ಯಾಂಕರ್ಗೆ ಬೆಂಕಿಹಿಡಿದು ಸ್ಫೋಟಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ‌

ಟ್ಯಾಂಕರ್ನಿಂದ ಹೊರಚೆಲ್ಲುತ್ತಿದ್ದ ತೈಲವನ್ನು ಕ್ಯಾನ್ಗಳಲ್ಲಿ ತುಂಬಿಸಿಕೊಳ್ಳುತ್ತಿದ್ದ ಜನರ ದೇಹ ಸ್ಫೋಟದಿಂದ ಹಲವು ಅಡಿ ಹಾರಿ ಬಿದ್ದಿದೆ. 12 ಮೃತದೇಹಗಳು ಪತ್ತೆಯಾಗಿವೆ. ಓರ್ವ ಗಾಯಾಳು ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ. ಸಮೀಪದಲ್ಲಿ ಇನ್ನಷ್ಟು ಮೃತದೇಹ ಬಿದ್ದಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿ ಚಾರ್ಲ್ಸ್ ಛಾಚಾ ಹೇಳಿದ್ದಾರೆ. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ಮುಂದುವರಿಸಿದ್ದು ಗಾಯಗೊಂಡವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News