×
Ad

ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: 33 ಮಂದಿ ಮೃತ್ಯು, 40 ಮಂದಿಗೆ ಗಾಯ

Update: 2021-07-19 22:45 IST
PTI

ಇಸ್ಲಮಾಬಾದ್, ಜು.19: ಈದ್ ಅಲ್ ಅದ್ಹಾ ಹಬ್ಬದ ರಜಾದಿನದ ಹಿನ್ನೆಲೆಯಲ್ಲಿ ಮನೆಗೆ ಮರಳುತ್ತಿದ್ದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಸ್ಸೊಂದು ಸೋಮವಾರ ಕೇಂದ್ರ ಪಾಕಿಸ್ತಾನ ಪ್ರಾಂತ್ಯದ ಹೆದ್ದಾರಿಯಲ್ಲಿ ಕಂಟೈನರ್ ಟ್ರಕ್ ಗೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಟ 33 ಮಂದಿ ಮೃತರಾಗಿ 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಸಿಯಾಲ್ಕೋಟ್‌ ನಿಂದ ಟೌನ್ಸಾ ರೋಡ್ ಮೂಲಕ ಪೂರ್ವಪಂಜಾಬ್ ಪ್ರಾಂತ್ಯದ ಡೆರಾ ಘಾಜಿಖಾನ್ ನಗರದತ್ತ ಬಸ್ಸು ಚಲಿಸುತ್ತಿತ್ತು. ಮೃತರಲ್ಲಿ ಬಸ್ಸಿನ ಚಾಲಕನೂ ಸೇರಿದ್ದಾನೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಂಪೂರ್ಣ ಜಖಂಗೊಂಡಿರುವ ಬಸ್ಸಿನಲ್ಲಿ ಸಿಲುಕಿಕೊಂಡವರ ದೇಹಗಳನ್ನು ರಕ್ಷಣಾ ಕಾರ್ಯದಲ್ಲಿ ನಿರತರಾದವರು ಹೊರಗೆಳೆಯುವ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ದುರಂತದಲ್ಲಿ ಮೃತಪಟ್ಟವರ ಹಾಗೂ ಗಾಯಗೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಿ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News