ಕೊರೋನ ಮೂಲ ಪತ್ತೆಚ್ಚುವ ಮರು ತನಿಖೆಗೆ ಸಹಕರಿಸಿ: ಚೀನಾಕ್ಕೆ ವಿಶ್ವಸಂಸ್ಥೆ ಕರೆ

Update: 2021-07-24 17:05 GMT

ನ್ಯೂಯಾರ್ಕ್, ಜು. 24: ಕೋವಿಡ್-19 ಸಾಂಕ್ರಾಮಿಕದ ಮೂಲದ ಬಗ್ಗೆ ನಡೆಸಲಾಗುವ ಇನ್ನಷ್ಟು ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಚೀನಾ ಸೇರಿದಂತೆ ಎಲ್ಲ ಸದಸ್ಯ ದೇಶಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ. ಕೊರೋನ ವೈರಸ್ ಮೂಲವನ್ನು ಪತ್ತೆಹಚ್ಚುವುದಕ್ಕೆ ಸಂಬಂಧಿಸಿದ ಮರು ತನಿಖೆಗೆ ಚೀನಾ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ.

‘‘ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುವಂತೆ ಚೀನಾ ಸೇರಿದಂತೆ ನಾವು ಎಲ್ಲ ಸದಸ್ಯ ದೇಶಗಳಿಗೆ ಮನವಿ ಮಾಡುತ್ತೇವೆ. ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಭಾವಿಸಿದರೆ ಎಲ್ಲ ದೇಶಗಳು ಸಹಕರಿಸುತ್ತವೆ ಎಂದು ನಾವು ಆಶಿಸುತ್ತೇವೆ’’ ಎಂದು ವಿಶ್ವಸಂಸ್ಥೆಯ ಉಪ ವಕ್ತಾರ ಫರ್ಹಾನ್ ಹಕ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News