ಅಪಘಾನಿಸ್ತಾನದಲ್ಲಿ ರಾತ್ರಿಕರ್ಫ್ಯೂ ಜಾರಿ: ಸರಕಾರ

Update: 2021-07-24 17:40 GMT

ಕಾಬೂಲ್, ಜು.24: ತಾಲಿಬಾನ್ ಪಡೆಗಳ ಆಕ್ರಮಣದ ಬಳಿಕ ಹೆಚ್ಚುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ದೇಶದ 34 ಪ್ರಾಂತ್ಯಗಳ ಪೈಕಿ 31ರಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಅಪಘಾನಿಸ್ತಾನದ ಒಳಾಡಳಿತ ಇಲಾಖೆ ಶನಿವಾರ ಹೇಳಿದೆ. ಮೇ ತಿಂಗಳಿಂದ ಆಕ್ರಮಣ ವ್ಯಾಪಕಗೊಳಿಸಿರುವ ತಾಲಿಬಾನ್ ಪಡೆ 

ಪ್ರಮುಖ ಗಡಿದಾಟುಗಳನ್ನು, 12ಕ್ಕೂ ಅಧಿಕ ಜಿಲ್ಲೆಗಳನ್ನು ಕೈವಶಪಡಿಸಿಕೊಂಡಿದ್ದು ಹಲವು ಪ್ರಮುಖ ಪ್ರಾಂತ್ಯಗಳನ್ನು ಸುತ್ತುವರಿದಿದೆ. ಹಿಂಸಾಚಾರ ಹತ್ತಿಕ್ಕಲು ಮತ್ತು ತಾಲಿಬಾನ್ಗಳ ಚಲನವಲನವನ್ನು ಕೆಲವೇ ಪ್ರದೇಶಗಳಿಗೆ ಸೀುತಗೊಳಿಸಲು ಕಾಬೂಲ್, ಪಂಜ್ಶಿರ್ ಮತ್ತು ನಂಗಾರ್ಹರ್ ಪ್ರಾಂತ್ಯ ಹೊರತುಪಡಿಸಿ ಉಳಿದ 31 ಪ್ರಾಂತ್ಯಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 4 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ. 

ಅಪಘಾನ್ನಿಂದ ಅಮೆರಿಕ ನೇತೃತ್ವದ ದೇಶಿ ಪಡೆಗಳ ವಾಪಸಾತಿ ಆರಂಭವಾದಂದಿನಿಂದ ಆ ದೇಶದಲ್ಲಿ ತಾಲಿಬಾನ್ ಪಡೆಗಳು ಮುಂದೊತ್ತಿ ಬರುತ್ತಿದ್ದು ದೇಶದ ಸುಮಾರು 400 ಜಿಲ್ಲೆಗಳಲ್ಲಿ ಅರ್ಧಾಂಶದಷ್ಟು ಜಿಲ್ಲೆಗಳನ್ನು ವಶಕ್ಕೆ ಪಡೆದಿದೆ. ಈದ್-ಅಲ್-ಅದಾ ಹಬ್ಬದ ಕಾರಣ ಈ ವಾರ ಅಲ್ಪಾವಧಿಯ ರಾಮದ ಬಳಿಕ ತಾಲಿಬಾನ್ ಮತ್ತೆ ಆಕ್ರಮಣ ತೀವ್ರಗೊಳಿಸಿದೆ. ಈ ಮಧ್ಯೆ, ಅಮೆರಿಕ ಪಡೆಗಳು ತಾಲಿಬಾನ್ ಮೇಲೆ ಈ ವಾರ ವಾಯುದಾಳಿ ನಡೆಸಿದೆ ಎಂದು ಪೆಂಟಗಾನ್ನ ವಕ್ತಾರ ಜಾನ್ ಕಿರ್ಬಿ ಗುರುವಾರ ಹೇಳಿದ್ದಾರೆ. ಅಪಘಾನ್ನಿಂದ ನಮ್ಮ ಪಡೆಗಳ ವಾಪಸಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಿ ತಾಲಿಬಾನ್ ಆಕ್ರಮಣ ತೀವ್ರಗೊಳಿಸಿರುವುದರಿಂದ ಅಪಘಾನ್ ಪಡೆಗಳ ನೆರಗೆ ಅಮೆರಿಕ ಧಾಸಿದೆ ಎಂದವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ತಾಲಿಬಾನ್, ವಾಯುದಾಳಿ ನಡೆಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಅಪಘಾನ್ ಗಡಿಭಾಗದಲ್ಲಿ ತುಕಡಿ ನಿಯೋಜಿಸಿದ ಪಾಕ್

ಸಂಘರ್ಷದಿಂದ ಜರ್ಜರಿತವಾಗಿರುವ ಅಪಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ನ್ನೆಲೆಯಲ್ಲಿ ಆ ದೇಶದ ಗಡಿಭಾಗದ ಮುಂಚೂಣಿ ನೆಲೆಯಲ್ಲಿ ಪಾಕಿಸ್ತಾನ ನಿಯುತ ತುಕಡಿ ನಿಯೋಜಿಸಿದೆ ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ. ಮುಂಚೂಣಿ ನೆಲೆಯಲ್ಲಿದ್ದ ಎಫ್ಸಿ(ಫ್ರಾಂಟಿಯರ್ ಕಾನ್ಸ್ಟಬ್ಯುಲರಿ), ಎಫ್ಸಿ ಬಲೂಚಿಸ್ತಾನ್ ಹಾಗೂ ಇತರ ಭದ್ರತಾ ಪಡೆಗಳ ಸ್ಥಾನದಲ್ಲಿ ಪಾಕಿಸ್ತಾನದ ಸೇನಾ ಯೋಧರನ್ನು ನಿಯೋಜಿಸಲಾಗಿದೆ ಎಂದು ಒಳಾಡಳಿತ ಇಲಾಖೆ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News