ಹಾಂಕಾಂಗ್: ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಪ್ರಥಮ ವ್ಯಕ್ತಿಯ ಅಪರಾಧ ಸಾಬೀತು

Update: 2021-07-27 17:16 GMT

ಹಾಂಕಾಂಗ್, ಜು.27: ಹಾಂಕಾಂಗ್ ನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲ್ಪಟ್ಟಿದ್ದ ಪ್ರಥಮ ವ್ಯಕ್ತಿ ತಾಂಗ್ಯಿಂಗ್ ಕಿಟ್ ಅಪರಾಧಿ ಎಂದು ಅಲ್ಲಿನ ಹೈಕೋರ್ಟ್ ತೀರ್ಪು ನೀಡಿದ್ದು ಶಿಕ್ಷೆಯ ಪ್ರಮಾಣ ಗುರುವಾರ ಘೋಷಣೆಯಾಗಲಿದೆ ಎಂದು ವರದಿಯಾಗಿದೆ.

ತಾಂಗ್ಯಿಂಗ್ ಕಿಟ್ ವಿರುದ್ಧ ದಾಖಲಿಸಿದ್ದ ಭಯೋತ್ಪಾದನೆ ಮತ್ತು ಪ್ರತ್ಯೇಕತೆಯನ್ನು ಪ್ರಚೋದಿಸುವ ಆರೋಪ ಸಾಬೀತಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ. 24 ವರ್ಷದ ತಾಂಗ್ಯಿಂಗ್ ಕಿಟ್ ಪ್ರತಿಭಟನಾ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದಾಗ ತನ್ನ ಮೋಟಾರು ಬೈಕ್ ಅನ್ನು ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಚಲಾಯಿಸಿದ ಆರೋಪ ಎದುರಿಸುತ್ತಿದ್ದರು. ಈ ಸಂದರ್ಭ ಕಿಟ್ ‘ಹಾಂಕಾಂಗ್ ಸ್ವತಂತ್ರವಾಗಲಿ’ ಎಂಬ ಘೋಷಣೆಯಿದ್ದ ಧ್ವಜ ಹಿಡಿದುಕೊಂಡಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು. ಕಿಟ್ ವಿರುದ್ಧ ದಾಖಲಿಸಿರುವ ಮತ್ತೊಂದು ಪ್ರಕರಣ, ಅಪಾಯಕಾರಿಯಾಗಿ ಬೈಕ್ ಚಲಾಯಿಸಿ ತೀವ್ರ ಪ್ರಮಾಣದ ದೈಹಿಕ ಗಾಯ ಉಂಟುಮಾಡಿದ ಆರೋಪದ ತೀರ್ಪು ಇನ್ನಷ್ಟೇ ಹೊರಬೀಳಬೇಕಾಗಿದೆ. 

ಈ ತೀರ್ಪನ್ನು ಪ್ರಜಾಪ್ರಭುತ್ವ ಪರ ಹೋರಾಟಗಾರರು ಮತ್ತು ಮಾನವಹಕ್ಕು ಹೋರಾಟಗಾರರ ಸಂಘಟನೆ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News