ಪೆಗಾಸಸ್ ಹಗರಣದ ಬಗ್ಗೆ ಚರ್ಚಿಸಲಿರುವ ಇಸ್ರೇಲ್-ಫ್ರಾನ್ಸ್

Update: 2021-07-27 17:33 GMT
photo: twitter/Benny Gantz(@gantzbe)/(Florence Parly)@florence_parly)

 ಜೆರುಸಲೇಂ, ಜು.27: ಈ ವಾರದಲ್ಲಿ ಪ್ಯಾರಿಸ್ ನಲ್ಲಿ ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗಾಂಟ್ಸ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವೆ ಫ್ರೋರೆನ್ಸ್ ಪಾರ್ಲಿ ನಡುವೆ ನಡೆಯುವ ಸಭೆಯಲ್ಲಿ ಪೆಗಾಸಸ್ ಸ್ಪೈವೇರ್ ಹಗರಣದ ಇತ್ತೀಚಿನ ಬೆಳವಣಿಗೆಯ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ.

ಗಾಂಟ್ಸ್ ಬುಧವಾರ ಫ್ರಾನ್ಸ್‌ಗೆ ಆಗಮಿಸಲಿದ್ದು ಉಭಯ ಮುಖಂಡರ ಸಭೆಯಲ್ಲಿ ಲೆಬನಾನ್ ಬಿಕ್ಕಟ್ಟು, ಇರಾನ್ ಜತೆಗಿನ ಪರಮಾಣು ಮಾತುಕತೆ ಹಾಗೂ ಇಸ್ರೇಲ್ ಸಂಸ್ಥೆ ಎನ್ಎಸ್ಒ ರೂಪಿಸಿರುವ ಪೆಗಾಸಸ್ ಸ್ಪೈವೇರ್ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಫ್ರಾನ್ಸ್‌ನ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ನ್ನೂ ಗುರಿಯಾಗಿಸಿ ಪೆಗಾಸಸ್ ಬಳಸಿರುವ ಬಗ್ಗೆ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News