ಲಿಬಿಯಾ; ದೋಣಿ ಮುಳುಗಿ 57 ಮಂದಿ ವಲಸಿಗರು ಸಾವು?

Update: 2021-07-27 17:44 GMT

 ಟ್ರಿಪೋಲಿ, ಜು.27: ಆಫ್ರಿಕಾದ ವಲಸಿಗರನ್ನು ಸಾಗಿಸುತ್ತಿದ್ದ ದೋಣಿಯೊಂದು ಲಿಬಿಯಾದ ತೀರದ ಬಳಿ ಸಮುದ್ರದಲ್ಲಿ ಸೋಮವಾರ ಮುಳುಗಿದ್ದು ದೋಣಿಯಲ್ಲಿದ್ದ ಕನಿಷ್ಟ 57 ಮಂದಿ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವಲಸೆ ಅಧಿಕಾರಿ ಹೇಳಿದ್ದಾರೆ.

ಪಶ್ಚಿಮ ಕರಾವಳಿ ತೀರದ ನಗರ ಖುಮ್ಸ್ನಿಂದ ದೋಣಿ ರವಿವಾರ ಪ್ರಯಾಣ ಆರಂಭಿಸಿತ್ತು. ದೋಣಿಯಲ್ಲಿ ಮಕ್ಕಳು, ಮಹಿಳೆಯರ ಸಹಿತ ಕನಿಷ್ಟ 75 ವಲಸಿಗರಿದ್ದರು. ಇವರಲ್ಲಿ 20 ಮಹಿಳೆಯರು, 2 ಮಕ್ಕಳ ಸಹಿತ 57 ಮಂದಿ ಮೃತಪಟ್ಟಿರುವ ಶಂಕೆಯಿದೆ ಎಂದವರು ಹೇಳಿದ್ದಾರೆ. 

18 ಮಂದಿಯನ್ನು ಮೀನುಗಾರರು ರಕ್ಷಿಸಿ ದಡ ತಲುಪಿಸಿದ್ದಾರೆ. ಇಂಜಿನ್ ಸಮಸ್ಯೆಯಿಂದ ಸಮುದ್ರದಲ್ಲಿ ಸ್ಥಗಿತಗೊಂಡ ದೋಣಿ, ಇದ್ದಕ್ಕಿದ್ದಂತೆ ಮುಳುಗಿದೆ ಎಂದು ರಕ್ಷಿಸಲ್ಪಟ್ಟಿರುವ ಇವರಲ್ಲಿ ನೈಜೀರಿಯಾ, ಘಾನಾ ಮತ್ತು ಜಾಂಬಿಯಾ ನಾಗರಿಕರು ಹೇಳಿದ್ದಾರೆ.

ಕಳೆದ ಒಂದು ವಾರದಲ್ಲಿ ಲಿಬಿಯಾ ತೀರದ ಬಳಿ ನಡೆದ 2ನೇ ದೋಣಿ ದುರಂತ ಇದಾಗಿದೆ. ಕಳೆದ ಬುಧವಾರ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಟ 20 ವಲಸೆ ಕಾರ್ಮಿಕರು ಮೃತರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News