ಸಿಒಪಿ26ರ ಯಶಸ್ಸಿಗೆ ಹವಾಮಾನ ವಿಜ್ಞಾನ ವರದಿ ನಿರ್ಣಾಯಕ: ವಿಶ್ವಸಂಸ್ಥೆ

Update: 2021-07-27 17:49 GMT

ವಿಶ್ವಸಂಸ್ಥೆ, ಜು.27: ನವೆಂಬರ್ ನಲ್ಲಿ ಗ್ಲಾಸ್ಗೋದಲ್ಲಿ ನಡೆಯುವ ಹವಾಮಾನ ಅಧಿವೇಶನದ ಯಶಸ್ಸಿಗೆ ಹವಾಮಾನ ಬದಲಾವಣೆ ಕುರಿತ ಅಂತರ್ಸರಕಾರ ಸಮಿತಿಯ ವರದಿ ನಿರ್ಣಾಯಕವಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ನಿರ್ದೇಶಕರು ಹೇಳಿದ್ದಾರೆ.

ಶೀಘ್ರವೇ ಅಂತಿಮಗೊಳಿಸುವ ವರದಿಯು ವಿಶ್ವದಾದ್ಯಂತ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ನಿರ್ದೇಶಕ ಪೆಟೆರಿ ತಾಲಸ್ ಹೇಳಿದ್ದಾರೆ.

ಹವಾಮಾನ ದುರಂತ ತಡೆಯುವ ನಿಟ್ಟಿನಲ್ಲಿ ನಡೆಯುವ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಹವಾಮಾನ ವಿಜ್ಞಾನ ವರದಿಗೆ ಪ್ರಾಮುಖ್ಯ ನೀಡುವ ನಿಟ್ಟಿನಲ್ಲಿ ಸುಮಾರು 200 ದೇಶಗಳು ಸೋಮವಾರ ಆನ್ಲೈನ್ ಅಭಿಯಾನಕ್ಕೆ ಚಾಲನೆ ನೀಡಿವೆ. ತಾಪಮಾನ ಹೆಚ್ಚುವಿಕೆಯಿಂದ ಇತ್ತೀಚಿನ ವಾರಗಳಲ್ಲಿ ವಿಶ್ವದಾದ್ಯಂತ ಸಾರ್ವಕಾಲಿಕ ದಾಖಲೆಯ ಉಷ್ಣ ಮಾರುತ, ನೆರೆ ಮತ್ತು ಬರದ ಪರಿಸ್ಥಿತಿ ಕಂಡುಬಂದಿರುವುದು ನಿರ್ಣಾಯಕ ಉಪಕ್ರಮದ ಬಗ್ಗೆ ಆಗ್ರಹವನ್ನು ಹೆಚ್ಚಿಸಿದೆ.

  ಇಂತಹ ಸಾಧ್ಯತೆಯ ಬಗ್ಗೆ ಕಳೆದ ಹಲವು ವರ್ಷಗಳಿಂದ ನಾವು ಎಚ್ಚರಿಸುತ್ತಿದ್ದೆವು ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥೆ ಪೆಟ್ರೀಷಿಯಾ ಎಸ್ಪಿನೋಸಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಮಾವಾನದ ಕುರಿತ ಜಿ20 ರಾಷ್ಟ್ರಗಳ ನಡುವಿನ ಪ್ರಮುಖ ಶೃಂಗಸಭೆ ಅಕ್ಟೋಬರ್ ಅಂತ್ಯದಲ್ಲಿ ನಡೆಯಲಿದೆ. ಈ ಮಧ್ಯೆ, ಹವಾಮಾನದ ವಿಷಯಕ್ಕೆ ಸಂಬಂಧಿಸಿ ಸೋಮವಾರ ಸರಕಾರಗಳ ಮಧ್ಯೆ ಮುಖಾಮುಖಿ ಮಾತುಕತೆ ನಡೆದಿರುವುದು ಈ ವಿಷಯದಲ್ಲಿ ನಡೆಯುತ್ತಿರುವ ಗಂಭೀರ ಉಪಕ್ರಮಗಳಿಗೆ ನಿದರ್ಶನವಾಗಿದೆ. 

ಲಂಡನ್ ನಲ್ಲಿ ನಡೆದ 2 ದಿನಗಳ ಸಚಿವ ಮಟ್ಟದ ಸಭೆಯಲ್ಲೂ ಭವಿಷ್ಯದಲ್ಲಿ ಕಲ್ಲಿದ್ದಲ ಬಳಕೆಯ ಬಗ್ಗೆ ಹೆಚ್ಚಿನ ಮಾತುಕತೆ ನಡೆಸಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ 50ಕ್ಕೂ ಅಧಿಕ ದೇಶಗಳ ಪರಿಸರ ಮತ್ತು ಹವಾಮಾನ ವಿಭಾಗಕ್ಕೆ ಸಂಬಂದಿಸಿದ ಸಚಿವರು, ಲಂಡನ್ನಲ್ಲಿ ಸುರಿದ ಮುಸಲಧಾರ ಮಳೆ ಹಾಗೂ ಭಾರೀ ಪ್ರವಾಹಕ್ಕೆ ಪ್ರತ್ಯಕ್ಷದರ್ಶಿಗಳಾಗಿದ್ದರು ಎಂದು ಬ್ರಿಟನ್ನ ಸಿಒಪಿ26 ಅಧ್ಯಕ್ಷ ಅಲೋಕ್ ಶರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News