ವಿದೇಶಿ ಪತ್ರಕರ್ತರಿಗೆ ಕಿರುಕುಳ: ಚೀನಾವನ್ನು ಖಂಡಿಸಿದ ಅಮೆರಿಕ

Update: 2021-07-30 17:10 GMT

ವಾಶಿಂಗ್ಟನ್, ಜು. 30: ಚೀನಾದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಬಗ್ಗೆ ವರದಿ ಮಾಡುತ್ತಿರುವ ವಿದೇಶಿ ಪತ್ರಕರ್ತರಿಗೆ ನೀಡಲಾಗುತ್ತಿರುವ ಕಿರುಕುಳ ಮತ್ತು ಬೆದರಿಕೆಯಿಂದ ಅಮೆರಿಕ ಕಳವಳಗೊಂಡಿದೆ ಎಂದು ಅಮೆರಿಕದ ವಿದೇಶ ಇಲಾಖೆಯ ವಕ್ತಾರರೊಬ್ಬರು ಗುರುವಾರ ಹೇಳಿದ್ದಾರೆ.

ಮಧ್ಯ ಚೀನಾದ ಹೆನನ್ ಪ್ರಾಂತದಲ್ಲಿ ಕಳೆದ ವಾರ ಸಂಭವಿಸಿರುವ ಭೀಕರ ವಿನಾಶಕಾರಿ ಪ್ರವಾಹದ ಬಗ್ಗೆ ಬಿಬಿಸಿ ಸುಳ್ಳು ಸುದ್ದಿಗಳನ್ನು ವರದಿ ಮಾಡುತ್ತಿದೆ ಎಂಬುದಾಗಿ ಚೀನಾ ಆರೋಪಿಸಿದ ಬಳಿಕ ಅಮೆರಿಕ ವಿದೇಶಾಂಗ ಇಲಾಖೆಯಿಂದ ಈ ಹೇಳಿಕೆ ಹೊರಬಿದ್ದಿದೆ.
ಅದೇ ವೇಳೆ, ತನ್ನ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ಬಿಬಿಸಿ ಆರೋಪಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News