ಅಮೆರಿಕದಲ್ಲಿ ಹೊಸ ಕೋವಿಡ್ ನಿರ್ಬಂಧಗಳ ಸಾಧ್ಯತೆ: ಜೋ ಬೈಡನ್‌

Update: 2021-07-31 17:39 GMT

ವಾಶಿಂಗ್ಟನ್, ಜು. 31: ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಅಥವ ನಿರ್ಬಂಧಗಳು ಜಾರಿಗ ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ.

ವಾರಾಂತ್ಯದ ವಿಶ್ರಾಂತಿಗಾಗಿ ಶ್ವೇತಭವನದಿಂದ ಹೆಲಿಕಾಪ್ಟರ್ನಲ್ಲಿ ಹೊರಡುವ ಮೊದಲು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಅಮೆರಿಕದ ಜನತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಅಥವಾ ನಿರ್ಬಂಧಗಳನ್ನು ನಿರೀಕ್ಷಿಸಬೇಕೇ ಎಂಬ ಪ್ರಶ್ನೆಗೆ, ಱಱಎಲ್ಲ ಸಾಧ್ಯತೆಗಳಿವೆೞೞಎಂದು ಅವರು ಉತ್ತರಿಸಿದರು.

ಆದರೆ, ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಅವರು ವಿವರಿಸಲಿಲ್ಲ. ಆದರೆ, ಗುರುವಾರ ಸಾಕಷ್ಟು ಸಂಖ್ಯೆಯಲ್ಲಿ ಜನರಿಗೆ ಲಸಿಕೆಗಳನ್ನು ಕೊಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News