×
Ad

ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿ ಅವಘಡ: ಜರ್ಮನಿ ಎನ್ಜಿಓದಿಂದ 100ಕ್ಕೂ ಅಧಿಕ ಅಕ್ರಮ ವಲಸಿಗರ ರಕ್ಷಣೆ

Update: 2021-08-01 23:26 IST

ಬರ್ಲಿನ್,ಆ.2: ಯುರೋಪ್ಗೆ ಅಕ್ರಮವಾಗಿ ವಲಸೆ ಬರುತ್ತಿದ್ದ 100ಕ್ಕೂ ಅಧಿಕ ಮಂದಿ ವಲಸಿಗರಿದ್ದ ನೌಕೆಯೊಂದು ಅವಘಡಕ್ಕೀಡಾಗಿದ್ದು, ಅದರಲ್ಲಿದ್ದವರನ್ನು ರಕ್ಷಿಸಲಾಗಿದೆಯೆಂದು ಜರ್ಮನಿಯ ಎನ್ಜಿಓ ಸಂಸ್ಥೆ ಸೀ ವಾಚ್ ತಿಳಿಸಿದೆ.

ರಕ್ಷಿಸಲ್ಪಟ್ಟವರಲ್ಲಿ ಹಲವರಿಗೆ ಸಮುದ್ರನೀರಿನ ಮಿಶ್ರಿತ ಗ್ಯಾಸೋಲಿನ್ ಜೊತೆ ಸಂಪರ್ಕಕ್ಕೆ ಬಂದಿದ್ದರಿಂದ ಅವರಲ್ಲಿ ಹಲವರಿಗೆ ಸುಟ್ಟಗಾಯಗಳಾಗಿವೆ ಎಂದು ತಿಳಿದುಬಂದಿದೆ.
  
ಕಡಲಿನ ವಾತಾವರಣ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಲಿಬಿಯಾ ಹಾಗೂ ಟ್ಯೂನಿಶಿಯಾದಿಂದ ಅಕ್ರಮ ವಲಸಿಗರು ದೋಣಿಗಳ ಮೂಲಕ ಇಟಲಿ ಹಾಗೂ ಯುರೋಪ್‌ ನ ಇತರ ಭಾಗಗಳಿಗೆ ತೆರಳುತ್ತಿರುವುದು ಹೆಚ್ಚತೊಡಗಿದೆ. ಗುರುವಾರದಂದು33 ವಲಸಿಗರಿದ್ದ ಎರಡು ದೋಣಿಗಳನ್ನು ಲಿಬಿಯದ ತಟರಕ್ಷಣಾ ದಳವು ತಡೆಗಟ್ಟಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News