ಅನಿವಾಸಿಗಳ ವಿದೇಶ ಪ್ರಯಾಣಕ್ಕೂ ಆಸ್ಟ್ರೇಲಿಯ ನಿರ್ಬಂಧ

Update: 2021-08-06 17:42 GMT

ಮೆಲ್ಬೋರ್ನ್,ಆ.7: ಕೋವಿಡ್19 ಡೆಲ್ಟಾ ವೈರಸ್ ಹಾವಳಿಯಿಂದ ಕಂಗೆಟ್ಟಿರುವ ಆಸ್ಟ್ರೇಲಿಯವು, ದೇಶವನ್ನು ಪ್ರವೇಶಿಸಿರುವ ಅನಿವಾಸಿ ಪ್ರಜೆಗಳ ನಿರ್ಗಮನಕ್ಕೂ ನಿರ್ಬಂಧಗಳನ್ನು ವಿಧಿಸಿದೆ. ಆಸ್ಟ್ರೇಲಿಯವನ್ನು ತೊರೆಯಲು ಬಯಸಿರುವ ವ್ಯಕ್ತಿಗಳು ತಮ್ಮ ನಿರ್ಗಮನಕ್ಕೆ ಸೂಕ್ತ ಕಾರಣವನ್ನು ಆಸ್ಟ್ರೇಲಿಯದ ಗಡಿ ಭದ್ರತಾ ಪಡೆ ಕಮೀಶನರ್ ಅವರಿಗೆ ಮನದಟ್ಟು ಮಾಡಬೇಕೆಂದು ಸೂಚನೆ ನೀಡಿದೆ. ಇದಕ್ಕಾಗಿ ಗುರುವಾರ ಅದು ತನ್ನ ಗಡಿ ನೀತಿಯಲ್ಲಿ ತಿದ್ದುಪಡಿಯನ್ನು ಮಾಡಿದೆ.

ಆಗಸ್ಟ್ 11ರಿಂದ ನೂತನ ತಿದ್ದುಪಡಿ ಕಾನೂನು ಜಾರಿಗೆ ಬರಲಿದೆ. ಆಸ್ಟ್ರೇಲಿಯ ಸರಕಾದ ಈ ಕ್ರಮದಿಂದಾಗಿ ಸ್ವದೇಶಗಳಿಗೆ ದೀರ್ಘಾವಧಿಯ ರಜೆಯಲ್ಲಿ ತೆರಳಲು ಬಯಸಿರುವ ಅನಿವಾಸಿಗಳಿಗೆ ಸರಕಾರದ ಈ ನಿರ್ಧಾರದಿಂದಾಗಿ ತಮ್ಮ ಯೋಜನೆಯ ಬಗ್ಗೆ ಮರುಚಿಂತನೆ ಮಾಡುವಂತಾಗಿದೆ.
  
ಅಲ್ಪ ಅವಧಿಗಾಗಿ ದೇಶವನ್ನು ತೊರೆಯಲು ಬಯಸುವ ಆಸ್ಟ್ರೇಲಿಯನ್ನರು ಹಿಂತಿರುಗಿ ಬರುವಾಗ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕಾಗುತ್ತದೆ. ಹೀಗೆ ದೇಶಕ್ಕೆ ವಾಪಾಸಾಗುವ ಅನಿವಾಸಿಗಳನ್ನು ಕ್ವಾರಂಟೈನ್‌ನಲ್ಲಿರಿಸುವ ಸ್ಥಳಗಳ ನಿರ್ವಹಣೆಯು ಸರಕಾರದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟು ಮಾಡುತ್ತದೆ ಎಂದರು.
 
ಕೋವಿಡ್ 19 ಡೆಲ್ಟಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಪ್ರಯತ್ನವಾಗಿ ಆಸ್ಟ್ರೇಲಿಯವು ತನ್ನ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚುಗಡೆಗೊಳಿಸಿದೆ. ವಿದೇಶದಿಂದ ಆಸ್ಟ್ರೇಲಿಯಕ್ಕೆ ಆಗಮಿಸುವ ಪ್ರಜೆಗಳು, ಅನಿವಾಸಿಗಳು ಹಾಗೂ ಅವರ ಸಮೀಪದ ಕುಟುಂಬಿಕರು ಹೊಟೇಲ್‌ನಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ.
 
ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಆಸ್ಟ್ರೇಲಿಯ ಈಗ ಅಕ್ಷರಶಃ ಕೋಟೆಯಂತಾಗಿದ್ದು, ವಿದೇಶದಲ್ಲಿರುವ ಸಾವಿರಾರು ಆಸ್ಟ್ರೇಲಿಯನ್ನರು ಸ್ವದೇಶಕ್ಕೆ ಬರಲಾಗದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆಂದು ವಿದೇಶಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News