×
Ad

ಪಾಕಿಸ್ತಾನ ಅಸೆಂಬ್ಲಿಯಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಖಂಡಿಸಿ ನಿರ್ಣಯ ಸ್ವೀಕಾರ

Update: 2021-08-06 23:46 IST

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯ ಹಿಂದೂ ದೇವಾಲಯದ ಮೇಲೆ ದಾಳಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಪಾಕಿಸ್ತಾನ ಅಸೆಂಬ್ಲಿ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ಅಸೆಂಬ್ಲಿಯು ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದೆ ಎಂದು ಪಾಕಿಸ್ತಾನ ನ್ಯಾಶನಲ್‌ ಅಸೆಂಬ್ಲಿ ಟ್ವೀಟ್‌ ಮಾಡಿದೆ.

"ರಹೀಮ್ ಯಾರ್ ಖಾನ್ ಗ್ರಾಮದಲ್ಲಿ ಹಿಂದೂ ದೇವಾಲಯದ ಮೇಲೆ ನಡೆದ ದಾಳಿಯನ್ನು ಖಂಡಿಸುವ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿ ಅಂಗೀಕರಿಸಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ. ಸಂಸತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಆರಾಧನಾ ಸ್ಥಳಗಳಿಗೆ ಸಂಪೂರ್ಣ ರಕ್ಷಣೆ ನೀಡಲು ಬದ್ಧವಾಗಿದೆ" ಎಂದು ಪಾಕಿಸ್ತಾನದ ರಾಷ್ಟ್ರೀಯ ಸಭೆ ಟ್ವೀಟ್ ಮಾಡಿದೆ.

ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಂದು ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ತಡೆಯಲು ವಿಫಲವಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಅಪರಾಧಿಗಳನ್ನು ಬಂಧಿಸಲು ಆದೇಶಿಸಿತು.

ಈ ವಿಷಯದ ಕುರಿತು ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್, "ಈ ಘಟನೆಯು ಪ್ರಪಂಚದಾದ್ಯಂತ ದೇಶದ ಪ್ರತಿಷ್ಠೆಯನ್ನು ಹಾಳು ಮಾಡಿದೆ" ಎಂದು ಹೇಳಿದರು.

"ಒಂದು ಹಿಂದೂ ದೇವಸ್ಥಾನವನ್ನು ಕೆಡವಲಾಯಿತು, ಮತ್ತು ಅವರು ಯಾವ ರೀತಿಯಲ್ಲಿ ನೊಂದಿರಬಹುದು ಎಂದು ಯೋಚಿಸಿ. ಇದೇ ರೀತಿ ಒಂದು ಮಸೀದಿಯನ್ನು ಕೆಡವಿದರೆ ಮುಸ್ಲಿಮರ ಪ್ರತಿಕ್ರಿಯೆ ಹೇಗಿರಬಹುದಿತ್ತು ಎಂದು ಯೋಚಿಸಿ" ಎಂದು ಮುಖ್ಯ ನ್ಯಾಯಾಧೀಶರು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಅವರನ್ನು ಪ್ರಶ್ನಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News