ವೀಸಾ ಅವಧಿ ವಿಸ್ತರಣೆ ಕೋರಿದ್ದ ನವಾಝ್ ಶರೀಫ್ ಅರ್ಜಿ ತಿರಸ್ಕರಿಸಿದ ಬ್ರಿಟನ್

Update: 2021-08-07 17:03 GMT

ಲಂಡನ್, ಆ.7: ವೀಸಾ ಅವಧಿ ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು, ಅಪೀಲು ಮಾಡುವ ಹಕ್ಕಿನೊಂದಿಗೆ ಬ್ರಿಟನ್ನ ಗೃಹ ಇಲಾಖೆ ತಿರಸ್ಕರಿಸಿದೆ ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಪಾಕಿಸ್ತಾನದಲ್ಲಿ 2 ಪ್ರಕರಣ ಎದುರಿಸುತ್ತಿರುವ ಶರೀಫ್ಗೆ ವೈದ್ಯಕೀಯ ಚಿಕಿತ್ಸೆಗೆ 4 ವಾರಗಳ ಅನುಮತಿಯನ್ನು ಲಾಹೋರ್ ಹೈಕೋರ್ಟ್ ಮಂಜೂರುಗೊಳಿಸಿದ ಬಳಿಕ, 2019ರ ನವೆಂಬರ್ ನಿಂದ ಅವರು ಲಂಡನ್ನಲ್ಲಿ ನೆಲೆಸಿದ್ದಾರೆ. ‌

ಶರೀಫ್ ಅವರ ಅರ್ಜಿಯನ್ನು ಬ್ರಿಟನ್ನ ಗೃಹ ಇಲಾಖೆ ತಿರಸ್ಕರಿಸಿದೆ. ಆದರೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು ಆ ಅರ್ಜಿಯ ತೀರ್ಪು ಹೊರಬರುವವರೆಗೆ ಅವರಿಗೆ ಲಂಡನ್ ನಲ್ಲಿ ನೆಲೆಸಲು ಅವಕಾಶವಿದೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಶರೀಫ್ ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ್ ಮುಸ್ಲಿಮ್ಲೀಗ್ ನವಾಝ್ ಪಕ್ಷದ ವಕ್ತಾರೆ ಮರಿಯಮ್ ಔರಂಗಝೇಬ್ ಹೇಳಿರುವುದಾಗಿ ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ. ವೀಸಾ ವಿಸ್ತರಣೆಯ ವಿನಹ, ವಿದೇಶಿ ಪ್ರಜೆಯೊಬ್ಬರು ಬ್ರಿಟನ್ನಲ್ಲಿ 6 ತಿಂಗಳಿಗೂ ಹೆಚ್ಚು ಕಾಲ ನೆಲೆಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News