ಅಫ್ಘಾನ್: ತಾಲಿಬಾನ್ ನಿಂದ ರೇಡಿಯೊ ಮ್ಯಾನೇಜರ್, ಪತ್ರಕರ್ತರ ಹತ್ಯೆ

Update: 2021-08-09 17:23 GMT

ಕಾಬೂಲ್ (ಅಫ್ಘಾನಿಸ್ತಾನ), ಆ. 9: ಅಫ್ಘಾನಿಸ್ತಾನದಲ್ಲಿ ಶಂಕಿತ ತಾಲಿಬಾನ್ ಉಗ್ರರು ಕಾಬೂಲ್ನಲ್ಲಿ ರೇಡಿಯೊ ನಿಲಯವೊಂದರ ಮ್ಯಾನೇಜರ್ರನ್ನು ಕೊಂದಿದ್ದಾರೆ ಹಾಗೂ ಹೆಲ್ಮಂಡ್ ಪ್ರಾಂತದಲ್ಲಿ ಪತ್ರಕರ್ತರೊಬ್ಬರನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ಸರಕಾರದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಬಂದೂಕುಧಾರಿಗಳು ರವಿವಾರ ಪಕ್ತಿಯ ಘಾಗ್ ರೇಡಿಯೊದ ನಿಲಯ ನಿರ್ದೇಶಕ ತೂಫಾನ್ ಉಮರ್ ಮತ್ತು ಅಫ್ಘಾನಿಸ್ತಾನದಲ್ಲಿ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸುವ ಸಂಘಟನೆ ಎನ್ಎಐನ ಓರ್ವ ಅಧಿಕಾರಿಯನ್ನು ಗುಂಡು ಹಾರಿಸಿ ಕೊಂದಿದ್ದಾರೆ. ಅವರಿಬ್ಬರನ್ನು ಹೊಂಚು ಹಾಕಿ ಕೊಲ್ಲಲಾಗಿದೆ.

‘‘ಉಮರ್ ರನ್ನು ಅಜ್ಞಾತ ಬಂದೂಕುಧಾರಿಗಳು ಕೊಂದಿದ್ದಾರೆ. ಅವರು ಪ್ರಗತಿಪರರಾಗಿದ್ದರು. ಸ್ವತಂತ್ರವಾಗಿ ಕೆಲಸ ಮಾಡುತ್ತಿರುವುದಕ್ಕಾಗಿ ನಮ್ಮನ್ನು ಕೊಲ್ಲಲಾಗುತ್ತಿದೆ’’ ಎಂದು ಎನ್ಎಐ ಮುಖ್ಯಸ್ಥ ಮುಜೀಬ್ ಖೇಲ್ವಾಟ್ಗರ್ ಹೇಳಿದರು.
ಈ ವರ್ಷ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಕನಿಷ್ಠ 30 ಪತ್ರಕರ್ತರು ಮತ್ತು ಮಾಧ್ಯಮ ಕೆಲಸಗಾರರನ್ನು ಕೊಲ್ಲಲಾಗಿದೆ, ಗಾಯಗೊಳೀಸಲಾಗಿದೆ ಅಥವಾ ಅಪಹರಿಸಲಾಗಿದೆ ಎಂದು ಕಳೆದ ತಿಂಗಳು ಎನ್ಎಐಯ ವರದಿಯೊಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News