ಚೀನಾದಲ್ಲಿ ಮಾರಣಾಂತಿಕ ಆಂಥ್ರಾಕ್ಸ್ ನ್ಯುಮೋನಿಯಾ ಕಾಯಿಲೆ ಪತ್ತೆ

Update: 2021-08-09 17:54 GMT
photo: website of Chinese Center for Disease Control and Prevention

ಬೀಜಿಂಗ್ : ಚೀನಾದ ಉತ್ತರ ಹೆಬೈ ಪ್ರಾಂತ್ಯದ ಚೆಂಗ್ಡೆ ನಗರದಲ್ಲಿ ಸೋಮವಾರ ಆಂಥ್ರಾಕ್ಸ್ ನ್ಯುಮೋನಿಯಾ ರೋಗಿ ಪತ್ತೆಯಾಗಿದ್ದು, ರೋಗಿಯು ಜಾನುವಾರು, ಕುರಿ ಹಾಗೂ ಈ ಪ್ರಾಣಿಗಳ ಉತ್ಪನ್ನಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ.

ರೋಗಲಕ್ಷಣಗಳನ್ನು ಕಂಡುಬಂದ ನಂತರ ರೋಗಿಯನ್ನು ನಾಲ್ಕು ದಿನಗಳ ಹಿಂದೆ ಆಂಬ್ಯುಲೆನ್ಸ್ ಮೂಲಕ ಬೀಜಿಂಗ್‌ಗೆ ಸಾಗಿಸಲಾಯಿತು ಹಾಗೂ  ಆ ವ್ಯಕ್ತಿಯನ್ನು ನಂತರ ಕ್ವಾರಂಟೈನ್ ನಲ್ಲಿ ಇರಿಸಿ  ಚಿಕಿತ್ಸೆಯನ್ನು  ನೀಡಲಾಯಿತು ಎಂದು ಬೀಜಿಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಬೀಜಿಂಗ್ ಸಿಡಿಸಿ) ಉಲ್ಲೇಖಿಸಿ ಚೀನಾದ ಸರಕಾರಿ ಸ್ವಾಮ್ಯದ  'ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.

ಆಂಥ್ರಾಕ್ಸ್ ರೋಗವು ಜಾನುವಾರು ಮತ್ತು ಕುರಿಗಳಲ್ಲಿ ಪ್ರಚಲಿತದಲ್ಲಿದೆ. ಅನಾರೋಗ್ಯ ಪೀಡಿತ ಪ್ರಾಣಿಗಳು ಅಥವಾ ಕಲುಷಿತ ಉತ್ಪನ್ನಗಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ಮಾನವನು ಸಾಮಾನ್ಯವಾಗಿ ಸೋಂಕಿಗೆ ಒಳಗಾಗುತ್ತಾನೆ. 95 ಪ್ರತಿಶತ ವರದಿಯಾದ ಪ್ರಕರಣಗಳಲ್ಲಿ  ಚರ್ಮದ ಸಂಪರ್ಕದಿಂದ ಸೋಂಕು ಉಂಟಾಗುತ್ತದೆ, ಇದು ಗುಳ್ಳೆಗಳು ಮತ್ತು ಚರ್ಮದ ನೆಕ್ರೋಸಿಸ್‌ಗೆ ಕಾರಣವಾಗುತ್ತದೆ ಎಂದು ಬೀಜಿಂಗ್ ಸಿಡಿಸಿ ಹೇಳಿದೆ.

ಆಂಥ್ರಾಕ್ಸ್ ನ್ಯುಮೋನಿಯಾ ಅತ್ಯಂತ ಅಪಾಯಕಾರಿ ಸೋಂಕು, ಇದು ರೋಗಿಯು ಬ್ಯಾಸಿಲಸ್ ಆಂಥ್ರಾಸಿಸ್ ಹೊಂದಿರುವ ಧೂಳನ್ನು ಉಸಿರಾಡಿದಾಗ ಮತ್ತು ಸೋಂಕು ತಗುಲಿದಾಗ ಸಂಭವಿಸುತ್ತದೆ.

ಕಲುಷಿತ ಆಹಾರ, ಸಾಮಾನ್ಯವಾಗಿ ಮಾಂಸವನ್ನು ಸೇವಿಸಿದ ನಂತರ ಜನರು ಕರುಳಿನ ಆಂಥ್ರಾಕ್ಸ್ ಗೆ ಒಳಗಾಗಬಹುದು. ಇದು  ವಾಕರಿಕೆ, ವಾಂತಿ ಹಾಗೂ  ಅತಿಸಾರದಂತಹ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತದೆ.

ಆಂಥ್ರಾಕ್ಸ್ ನೇರವಾಗಿ ಮನುಷ್ಯರ ನಡುವೆ ಹರಡಬಹುದು ಆದರೆ ಇದು ಫ್ಲೂ ಅಥವಾ ಕೋವಿಡ್-19 ನಂತೆ ಸಾಂಕ್ರಾಮಿಕವಲ್ಲ. ಬ್ಯಾಸಿಲಸ್ ಆಂಥ್ರಾಸಿಸ್ ಒಂದು ಬ್ಯಾಕ್ಟೀರಿಯ ಹಾಗೂ ಬಹು ಆ್ಯಂಟಿಬಯಾಟಿಕ್‌ಗಳು ಚಿಕಿತ್ಸೆಗೆ ಪರಿಣಾಮಕಾರಿ ಎಂದು ವರದಿ ಹೇಳಿದೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News