ಇಥಿಯೋಪಿಯಾ: ಸಂಘರ್ಷ ಪೀಡಿತ ಟಿಗ್ರೆಯಲ್ಲಿ ಸೇನಾಪಡೆಗಳಿಂದ ಅತ್ಯಾಚಾರ, ಹಿಂಸೆ

Update: 2021-08-11 17:30 GMT

ಲಂಡನ್,ಆ.11: ಇಥಿಯೋಪಿಯ ಹಾಗೂ ಎರಿಟ್ರಿಯದ ಸೇನಾಪಡೆಗಳು ಟಿಗ್ರೆಯಲ್ಲಿ ಭುಗಿಲೆದ್ದಿರುವ ಅಂತರ್ಯದ್ಧದ ಸಂದರ್ಭ ನೂರಾರು ಮಹಿಳೆಯರು ಹಾಗೂ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿವೆ ಎಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್ನ್ಯಾಶನಲ್ ತನ್ನ 36 ಪುಟಗಳ ವರದಿಯಲ್ಲಿ ತಿಳಿಸಿದೆ.

ಇಥಿಯೋಪಿಯಾ ಹಾಗೂ ಎರಿಟ್ರಿಯ ಪಡೆಗಳ ದೌರ್ಜನ್ಯಕ್ಕೊಳಗಾಗಿ ಬದುಕುಳಿದಿರುವ 63 ಮಂದಿಯ ಸಂದರ್ಶನವನ್ನು ಆಧರಿಸಿ ತಯಾರಿಸಿದ ವರದಿಯನ್ನು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಬುಧವಾರ ಬಿಡುಗಡೆಗೊಳಿಸಿದೆ.ಪ್ರಕರಣಗಳ ತನಿಖೆಯನ್ನು ಇಥಿಯೋಪಿಯಾದ ಕಾನೂನು ಅನುಷ್ಠಾನ ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಈವರೆಗೆ ಕನಿಷ್ಠ ಮೂವರು ಸೈನಿಕರನ್ನು ದೋಷಿಗಳೆಂದು ಘೋಷಿಸಲಾಗಿದೆ ಮತ್ತು ಇತರ 25 ಮಂದಿಯ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಕಬ್ಬಿಣದ ಮೊಳೆಗಳು ಮತ್ತು ಜಲ್ಲಿಕಲ್ಲುಗಳಂತಹ ವಸ್ತುಗಳನ್ನು ಸಂತ್ರಸ್ತರ ಗುಪ್ತಾಂಗದೊಳಗೆ ತೂರಿಸುವ ಮೂಲಕ ಅವರ ಒಳಾಂಗಗಳಿಗೆ ಸರಿಪಡಿಸಲಾಗದಂತಹ ಹಾನಿಯನ್ನುಂಟು ಮಾಡಲಾಗಿದೆ ಎಂದು ವರದಿ ಆಘಾತ ವ್ಯಕ್ತಪಡಿಸಿದೆ.
 
‘‘ ಟಿಗ್ರೆಯಲ್ಲಿ ಮಹಿಳೆೆಯರು ಹಾಗೂ ಬಾಲಕಿಯರ ಮೇಲೆ ದೈಹಿಕವಾದ ಹಾಗೂ ಮಾನಸಿಕವಾಗಿ ಶಾಶ್ವತವಾದ ಹಾನಿಯನ್ನು ಉಂಟು ಮಾಡಲು ಅತ್ಯಾಚಾರ ಹಾಗೂ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸಿರುವುದು ಸ್ಪಷ್ಟವಾಗಿದೆ. ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಕಾರ್ಯದರ್ಶಿ ದಜನರಲ್ ಆ್ಯಗ್ನೆಸಂ ಕ್ಯಾಲ್ಲಾಮಾರ್ಡ್ ತಿಳಿಸಿದ್ದಾರೆ. ನೂರಾರು ಮಂದಿಯನ್ನು ಅತ್ಯಂತ ಬರ್ಬರವಾಗಿ ಈ ಸೇನಾಪಡೆಗಳು ನಡೆಸಿಕೊಂಡಿವೆ ಎಂದು ವರದಿ ಹೇಳಿದೆ. ಟಿಗ್ರೆಯಲ್ಲಿ ಎಸಗಲಾದ ಲೈಂಗಿಕ ಅಪರಾಧಗಳು ಅತ್ಯಂತ ಆಘಾತಕಾರಿಯಾಗಿದ್ದತು, ಯುದ್ಧಪಾರದಗಳು ಹಾಗೂ ಮಾನವತೆಯ ವಿರುದ್ಧದ ಅಪಾಯಗಳಿಗೆ ಸಮವಾಗಿದೆ ಎಂದು ಆ್ಯಮ್ನೆಸ್ಟಿ ವರದಿ ಹೇಳಿದೆ.
    
2019 ಸಾಲಿನ ನೊಬೆಲ್ ಪುರಸ್ಕೃತ, ಇಥಿಯೋಪಿಯಾ ಪ್ರಧಾನಿ ಅಬಿಯ್ ಅಹ್ಮದ್ ಅವರು ಟಿಗ್ರೆ ಪ್ರಾಂತದಲ್ಲಿ ಆಡಳಿತ ನಡೆಸುತ್ತಿರುವ ಪ್ರಾದೇಶಿಕ ಪಕ್ಷ ಟಿಗ್ರೆ ನ್ಯಾಶನಲ್ ಫ್ರಂಟ್ನ ಸರಕಾರವನ್ನು ಪತನಗೊಳಿಸಲು ಕಳೆದ ನವೆಂಬರ್ನಲ್ಲಿ ಸೇನೆಯನ್ನು ಕಳುಹಿಸಿದ ಬಳಿಕ ಉತ್ತರ ಇಥಿಯೋಪಿಯಾ ಹಿಂಸಾಚಾರದಿಂದ ತತ್ತರಿಸುತ್ತಿದೆ.

ಇಥಿಯೋಪಿಯಾದಲ್ಲಿ ಭುಗಿಲೆದ್ದಿರುವ ಅಂತರ್ಯುದ್ಧವು ಉಲ್ಬಣಾವಸ್ಥೆಗೆ ತಲುಪಿದ್ದು, ನೆರವು ಕಾರ್ಯಕರ್ತರು ಅಲ್ಲಿ ಜನರಿಗೆ ಆಹಾರ, ಔಷಧಿಗಳನ್ನು ಒದಗಿಸಲು ಹರಸಾಹಸ ಪಡುತ್ತಿದ್ದಾರೆ. ಪ್ರಸಕ್ತ ಟೆಗ್ರೆಯಲ್ಲಿ 4 ಲಕ್ಷದಷ್ಚು ಜನರು ಬರಗಾಲದಂತಹ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆಂದು ವಿಶ್ವಸಂಸ್ಥೆ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News