ಇರಾನ್ ಜತೆ ವ್ಯಾವಹಾರಿಕ ಸಂಬಂಧ ಹೊಂದಿದ್ದ ಒಮಾನ್ ಉದ್ಯಮಿಯ ಮೇಲೆ ಅಮೆರಿಕ ನಿರ್ಬಂಧ ಜಾರಿ

Update: 2021-08-14 18:18 GMT

 ವಾಷಿಂಗ್ಟನ್, ಆ.14: ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಖುಡ್ಸ್ ಪಡೆ(ಐಆರ್ಜಿಸಿ-ಕ್ಯುಎಫ್)ಗೆ ನೆರವಾಗುವ ತೈಲ ಕಳ್ಳಸಾಗಾಣಿಕೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಒಮಾನ್ ಉದ್ಯಮಿ ಹಾಗೂ ಅವರ ಸಂಸ್ಥೆಯ ಮೇಲೆ ನಿರ್ಬಂಧ ಅಮೆರಿಕ ವಿಧಿಸಿರುವುದಾಗಿ ವರದಿಯಾಗಿದೆ.

ಒಮಾನ್ನ ಉದ್ಯಮಿ ಮಹ್ಮೂದ್ ರಶೀದ್ ಅಮುರ್ ಅಲ್ಹಬ್ಸಿ ಓರ್ವ ವಿದೇಶಿ ದಲ್ಲಾಳಿಯಾಗಿದ್ದು , ಆಗ್ನೇಯ ಏಶ್ಯಾದ ದೇಶಗಳ ಸಹಿತ ವಿದೇಶಿ ಗ್ರಾಹಕರಿಗೆ ಇರಾನ್ನ ತೈಲವನ್ನು ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈತ ಖುಡ್ಸ್ ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಸಹಭಾಗಿಯಾಗಿದ್ದಾನೆ ಎಂು ಅಮೆರಿಕದ ವಿತ್ತ ಇಲಾಖೆ ಹೇಳಿದೆ.

ಅಲ್ಹಬ್ಸಿಗೆ ಸೇರಿದ 4 ಸಂಸ್ಥೆಗಳಿಗೆ ನಿರ್ಬಂಧ ಅನ್ವಯಿಸಲಿದೆ. ಇದರಲ್ಲಿ 2 ಒಮಾನ್ ನಲ್ಲಿ , 1 ಲೈಬೀರಿಯಾದಲ್ಲಿ ಹಾಗೂ ಇನ್ನೊಂದು ರಮಾನಿಯಾದಲ್ಲಿದೆ.

 ಅಮೆರಿಕದ ಕಾರ್ಯನಿರ್ವಾಹಕ ಆದೇಶ 13224ರ ಪ್ರಕಾರ ಈ ನಿರ್ಬಂಧ ಜಾರಿಯಾಗಿದೆ. 2001ರಲ್ಲಿ ಜಾರಿಗೊಂಡಿರುವ ಈ ಕಾಯ್ದೆಯು ವಿದೇಶೀ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರನ್ನು ಗುರಿಯಾಗಿಸಿದೆ. ಇರಾನ್ ಸರಕಾರದ ಸಂಸ್ಥೆಯಾಗಿರುವ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಂತಹ ಸಂಸ್ಥೆಯಾಗಿದೆ ಎಂದು 2019ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು.

  ಇರಾನ್ನ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವನ್ನು ಐಆರ್ಜಿಸಿ-ಕ್ಯುಎಫ್ ದುಷ್ಕತ್ಯಗಳಿಗೆ ನಿಧಿ ಒದಗಿಸಲು ಬಳಸುವ ಮೂಲಕ ಇರಾನ್ನ ಜನತೆಗೆ ಕೆಡುಕುಂಟು ಮಾಡುತ್ತಿದೆ. ಈ ವ್ಯವಹಾರ ಪ್ರಮುಖ ವಿದೇಶೀ ಮಧ್ಯವರ್ತಿಯೊಬ್ಬರನ್ನು ಆಧರಿಸಿದ್ದು , ಇಂತಹ ಪ್ರಯತ್ನಗಳನ್ನು ಬೆಂಬಲಿಸುವ ಯಾವುದೇ ಪ್ರಯತ್ನವನ್ನು ಅಮೆರಿಕ ಬಯಲಿಗೆಳೆಯಲಿದೆ ಮತ್ತು ತಡೆಯುತ್ತದೆ ಎಂದು ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ವಿಭಾಗದ ನಿರ್ದೇಶಕಿ ಆ್ಯಂಡ್ರಿಯಾ ಗಾಸ್ಕಿ ಹೇಳಿದ್ದಾರೆ. ಫೋರ್ಜರಿ ಮಾಡಿದ ದಾಖಲೆ ಪತ್ರಗಳನ್ನು ಬಳಸಿ, ಲಂಚ ಪಾವತಿಸಿ ಉದ್ಯಮಿ ಅಲ್ಹಬ್ಸಿ ಇರಾನ್ಗೆ ಸಂಬಂಧಿಸಿದ ದಿಗ್ಭಂಧನವನ್ನು ತಪ್ಪಿಸಿಕೊಂಡು ಅಲ್ಲಿಂದ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಟದಲ್ಲಿ ತೊಡಗಿದ್ದಾರೆ ಎಂದು ಅಮೆರಿಕ ಹೇಳಿದೆ.

ಈ ಘೋಷಣೆ ಸ್ವಾಗತಾರ್ಹ ಕ್ರಮ ಎಂದು ಅಮೆರಿಕದ ವಿದೇಶ ವ್ಯವಹಾರ ಇಲಾಖೆ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News