ಆಗಸ್ಟ್ 31ರೊಳಗೆ ಅಮೆರಿಕ, ಮಿತ್ರರಾಷ್ಟ್ರಗಳ ತೆರವು ಕಾರ್ಯ ಪೂರ್ಣಗೊಳ್ಳದು: ಜರ್ಮನಿ

Update: 2021-08-24 17:30 GMT

ಬರ್ಲಿನ್, ಆ.24: ಅಫ್ಗಾನ್ ನಿಂದ ಹೊರತೆರಳಲು ಬಯಸುವ ಜನರನ್ನು ಆಗಸ್ಟ್ 31ರ ಗಡುವಿನೊಳಗೆ ಸ್ಥಳಾಂತರಿಸಲು ಅಮೆರಿಕ ಮತ್ತು ಮಿತ್ರರಾಷ್ಟ್ರಗಳಿಗೆ ಸಾಧ್ಯವಾಗದು ಎಂದು ಜರ್ಮನ್ ವಿದೇಶ ವ್ಯವಹಾರ ಸಚಿವ ಹೈಕೊ ಮಾಸ್ ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ. 

ಗಡುವನ್ನು ಆಗಸ್ಟ್ 31ರ ಬಳಿಕ ಕೆಲ ದಿನ ವಿಸ್ತರಿಸಿದರೂ ನಾವು ಅಥವಾ ಅಮೆರಿಕ ಇಚ್ಚಿಸುವ ಎಲ್ಲರನ್ನೂ ಅಫ್ಗಾನ್ ನಿಂದ ತೆರವುಗೊಳಿಸಲಾಗದು. ಆದ್ದರಿಂದ ನಿಗದಿತ ಕಾರ್ಯಕ್ರಮದಂತೆ ಸೈನಿಕ ಕಾರ್ಯಾಚರಣೆ ಮುಗಿದ ಬಳಿಕವೂ ಅಲ್ಲಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿಸುವ ಬಗ್ಗೆ ಮಿತ್ರರಾಷ್ಟ್ರಗಳು ಯೋಜನೆ ರೂಪಿಸಬೇಕಾಗಿದೆ ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಸ್ ಹೇಳಿದ್ದಾರೆ. 

ಆಗಸ್ಟ್ 31ರ ಗಡುವಿಗೇ ಬದ್ಧರಾದರೆ, ಅಫ್ಗಾನ್‌ ನಿಂದ ಅಮೆರಿಕದ ಸೇನೆಯನ್ನು ತೆರವುಗೊಳಿಸಲೇ 2 ದಿನ ಬೇಕಾಗುತ್ತದೆ. ಆದ್ದರಿಂದ ಅಫ್ಗಾನ್‌ ನಿಂದ ಸೇನೆ ವಾಪಸಾತಿಯ ಗಡುವನ್ನು ಅಮೆರಿಕ ವಿಸ್ತರಿಸಬೇಕು ಎಂದು ಜಿ7 ದೇಶಗಳ ಮುಖಂಡರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News