ಅಪ್ಘಾನ್ ನಲ್ಲಿ 10 ಮಿಲಿಯನ್ ಮಕ್ಕಳು ಹತಾಶ ಸ್ಥಿತಿಯಲ್ಲಿ: ಯುನಿಸೆಫ್ ಎಚ್ಚರಿಕೆ

Update: 2021-08-25 17:05 GMT
ಸಾಂದರ್ಬಿಕ ಚಿತ್ರ [photo: PTI]

ವಿಶ್ವಸಂಸ್ಥೆ, ಆ.25: ಅಪ್ಘಾನ್ ನ 10 ಮಿಲಿಯನ್ ಮಕ್ಕಳು ಮಾನವೀಯ ನೆರವಿನ ನಿರೀಕ್ಷೆಯಲ್ಲಿ ಹತಾಶ ಸ್ಥಿತಿಯಲ್ಲಿವೆ ಮತ್ತು ಸುಮಾರು 1 ಮಿಲಿಯನ್ ಮಕ್ಕಳು ಈ ವರ್ಷ ಜೀವಕ್ಕೇ ಅಪಾಯಕಾರಿಯಾದ ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ಸಂಸ್ಥೆ (ಯುನಿಸೆಫ್) ಎಚ್ಚರಿಸಿದೆ .

ಅಪ್ಘಾನ್ ನಲ್ಲಿ ಹಲವು ವರ್ಷಗಳ ಕ್ಷಾಮ, ಸಂಷರ್ಘ , ಆರ್ಥಿಕತೆಯ ಕುಸಿತ, ಕೊರೋನ ಸೋಂಕಿನ ಸಮಸ್ಯೆಯ ಜೊತೆಗೆ ಮತ್ತೊಂದು ಭೀಕರ ಸಮಸ್ಯೆಯ ಆತಂಕವಿದೆ. ದೇಶದ ಜನಸಂಖ್ಯೆಯ ಮೂರನೇ ಒಂದರಷ್ಟು, ಅಂದರೆ 14 ಮಿಲಿಯನ್ ಜನತೆಗೆ ಆಹಾರದ ಅಭದ್ರತೆ ಎದುರಾಗಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೆಸ್ಲೆ ಹೇಳಿದ್ದಾರೆ.

 2002ರಿಂದ ಅಫ್ಘಾನ್ ಗೆ 5.3 ಬಿಲಿಯನ್ ಡಾಲರ್ ನೆರವು ನೀಡಿದ್ದ ವಿಶ್ವಸಂಸ್ಥೆ, 27 ಯೋಜನೆಗಳನ್ನು ಜಾರಿಗೊಳಿಸಿದೆ. ಕಳೆದ ವಾರ ನೂರಾರು ಮಿಲಿಯನ್ ಆರ್ಥಿಕ ನೆರವಿನ ಸಹಿತ ಅಪ್ಘಾನ್ಗೆ ನೀಡುವ ನೆರವನ್ನು ವಿಶ್ವಬ್ಯಾಂಕ್ ಸ್ಥಗಿತಗೊಳಿಸಿದೆ. ಈ ಮಧ್ಯೆ, ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಅಪ್ಘಾನ್ ನಿಂದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಚುರುಕುಗೊಳಿಸಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News