ಜರ್ಮನಿಯಲ್ಲಿ ಪಿಝಾ ಡೆಲಿವರಿ ಕೆಲಸ ಮಾಡುತ್ತಿರುವ ಅಫ್ಘಾನಿಸ್ತಾನದ ಮಾಜಿ ಸಚಿವ

Update: 2021-08-26 06:40 GMT
Photo: Twitter

ಬರ್ಲಿನ್: ಜರ್ಮನಿಯ ಲೀಪ್ಝಿಗ್ ನಗರದಲ್ಲಿ ಆಶ್ರಯ ಪಡೆದುಕೊಂಡಿರುವ ಅಫ್ಗಾನಿಸ್ತಾನದ ಮಾಜಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಸಯ್ಯದ್ ಅಹ್ಮದ್ ಶಾ ಸಾದರ್ ಈಗ ಜರ್ಮನಿಯ ನಗರಗಳಲ್ಲಿ ಆಹಾರ ಡೆಲಿವರಿ ಮಾಡುವ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ತಾಲಿಬಾನ್‍ಗೆ ಭಯಪಟ್ಟು ಅಫ್ಗಾನಿಸ್ತಾನ ತೊರೆದು ಒಂದು ವರ್ಷದ ನಂತರ ಅವರು ಲೀಪ್ಝಿಗ್ ನಗರದಲ್ಲಿ ಡೆಲಿವರಿ ಸೇವೆ ಸಂಸ್ಥೆಯೊಂದರ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಅವರು ಪಿಝಾ ಡೆಲಿವರಿಗೆಂದು ತೆರಳುತ್ತಿರುವ ವೇಳೆ ಸ್ಥಳೀಯ ಪತ್ರಕರ್ತರೊಬ್ಬರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಸೈಕಲ್ ಒಂದರಲ್ಲಿ ನಗರದ ಹಲವೆಡೆ ಅವರು ಆಹಾರ ಡೆಲಿವರಿ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮೂರು ವರ್ಷಗಳ ಹಿಂದೆ 2018ರಲ್ಲಿ ಅಫ್ಗಾನಿಸ್ತಾನದ ಅಶ್ರಫ್ ಘನಿ ನೇತೃತ್ವದ ಸರಕಾರದಲ್ಲಿ ಅವರು ಸಚಿವರಾಗಿ ಸೇರ್ಪಡೆಗೊಂಡಿದ್ದರು. ಆಫ್ಗಾನಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದ ಅವರು ಕಳೆದ ವರ್ಷ ರಾಜೀನಾಮೆ ನೀಡಿ ಡಿಸೆಂಬರ್ 2020ರಲ್ಲಿ ಜರ್ಮನಿಗೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News