"ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನಿರ್ವಹಣೆ": ಅಫ್ಗಾನ್‌ ನಿಂದ ಅಮೆರಿಕ ಸೇನಾ ವಾಪಸಾತಿ ಬಗ್ಗೆ ಟ್ರಂಪ್ ಪ್ರತಿಕ್ರಿಯೆ

Update: 2021-08-31 17:39 GMT

ವಾಷಿಂಗ್ಟನ್, ಆ.31: ಅಫ್ಗಾನಿಸ್ತಾನದಿಂದ ಅಮೆರಿಕನ್ನರು ಹಿಂದೆ ಸರಿದಂತೆ, ಇದುವರೆಗೆ ಇತಿಹಾಸದಲ್ಲಿ ಯುದ್ಧದಿಂದ ಹಿಂದೆ ಸರಿಯುವ ಪ್ರಕ್ರಿಯೆಯನ್ನು ಇಷ್ಟು ಕೆಟ್ಟದಾಗಿ ಮತ್ತು ಅಸಮರ್ಥವಾಗಿ ನಿರ್ವಹಿಸಿದ ದಾಖಲೆಯಿಲ್ಲ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

 ಇದರ ಜೊತೆಗೆ, ಅಫ್ಗಾನ್ನಲ್ಲಿರುವ ಅಮೆರಿಕದ ಎಲ್ಲಾ ಸಾಧನಗಳು ಹಾಗೂ ಆ ದೇಶದಲ್ಲಿನ ಕಾರ್ಯಾಚರಣೆಗೆ ಅಮೆರಿಕ ವ್ಯಯಿಸಿದ 85 ಬಿಲಿಯನ್ ಡಾಲರ್ ವೆಚ್ಚ ಸಂಪೂರ್ಣವಾಗಿ ಮರಳಿ ಬರಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ. ಒಂದು ವೇಳೆ ಇದನ್ನು ಮರಳಿಸದಿದ್ದರೆ ನಮ್ಮೆಲ್ಲಾ ಸೇನಾಶಕ್ತಿಯನ್ನು ಪ್ರಯೋಗಿಸಬೇಕು ಅಥವಾ ಅಲ್ಲಿರುವ ನರಕವನ್ನು ಬಾಂಬ್ ಹಾಕಿ ಹೊರದಬ್ಬಬೇಕು. ಈ ರೀತಿಯ ದುರ್ಬಲ ರೀತಿಯ ಹಿಂದೆಸರಿಯುವ ಪ್ರಕ್ರಿಯೆಯಂತಹ ಮೂರ್ಖತನ ನಡೆಯಬಹುದು ಎಂದು ಯಾರೊಬ್ಬರೂ ಯೋಚಿಸಿಯೂ ಇರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಬೈಡೆನ್ ಆಡಳಿತ ಅಮೆರಿಕದ ಪರವಾದ ವಿಶೇಷ ಕಾರ್ಯವನ್ನು ಕಾರ್ಯಗತಗೊಳಿಸಲು ಅನುಮತಿ ನೀಡುವ ಬದಲು, ತಾನೇ ನಿಗದಿಗೊಳಿಸಿದ್ದ ಅಂತಿಮ ಗಡುವನ್ನು ಸಾಧಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಿತು ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News