ಅಫ್ಗಾನ್ ನೊಂದಿಗಿನ ಪ್ರಮುಖ ಗಡಿದಾಟು ಮುಚ್ಚಿದ ಪಾಕ್

Update: 2021-09-02 17:27 GMT

ಇಸ್ಲಮಾಬಾದ್, ಸೆ.2: ಅಫ್ಗಾನ್ ನೊಂದಿಗಿನ ಪ್ರಮುಖ ಗಡಿದಾಟು ಪ್ರದೇಶ, ಚಮನ್ ಗಡಿಭಾಗವನ್ನು ಭದ್ರತಾ ಕಾರಣಕ್ಕಾಗಿ ಪಾಕಿಸ್ತಾನ ತಾತ್ಕಾಲಿಕವಾಗಿ ಮುಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.

ಅಫ್ಗಾನ್ನ ಮೇಲೆ ತಾಲಿಬಾನಿಗಳು ನಿಯಂತ್ರಣ ಸಾಧಿಸಿದ ಬಳಿಕ ಅಲ್ಲಿಂದ ಪಲಾಯನ ಮಾಡುತ್ತಿರುವ ಸ್ಥಳೀಯರು ಚಮನ್ ಗಡಿದಾಟು ದಾಟಿ ಪಾಕಿಸ್ತಾನ ಪ್ರವೇಶಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅಫ್ಗಾನ್ ಗಡಿಭಾಗದಲ್ಲಿರುವ ಎರಡನೇ ಬೃಹತ್ ವಾಣಿಜ್ಯ ಕೇಂದ್ರವಾಗಿರುವ ಚಮನ್ ಭಾಗದಲ್ಲಿ ಭದ್ರತೆಗೆ ಎದುರಾಗಿರುವ ಭೀತಿಯ ಹಿನ್ನೆಲೆಯಲ್ಲಿ ಈ ಗಡಿ ದಾಟು ಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News