ಪೋಲಂಡ್: ವಿಷ ಅಣಬೆ ಸೇವಿಸಿ ನಿರಾಶ್ರಿತರ ಶಿಬಿರದಲ್ಲಿದ್ದ ಅಫ್ಗಾನ್ ಬಾಲಕ ಮೃತ್ಯು

Update: 2021-09-02 18:14 GMT

 ವಾರ್ಸಾ, ಸೆ.2: ಇತ್ತೀಚೆಗಷ್ಟೇ ಅಫ್ಗಾನ್ನಿಂದ ಸ್ಥಳಾಂತರಗೊಂಡು ಪೋಲಂಡ್ ನ ನಿರಾಶ್ರಿತರ ಶಿಬಿರದಲ್ಲಿದ್ದ 5 ವರ್ಷದ ಅಫ್ಗಾನ್ ಬಾಲಕ ವಿಷಾಣಬೆ ಸೇವಿಸಿ ಮೃತಪಟ್ಟಿದ್ದು, ಆತನ 6 ವರ್ಷದ ಸಹೋದರನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಾರ್ಸಾ ಬಳಿಯ ಪೊಡ್ಕೊವಾ ಲೆನ್ಸಾ ಎಂಬಲ್ಲಿ ಬಾಲಕನ ಕುಟುಂಬವರು ನೆಲೆಸಿದ್ದ ನಿರಾಶ್ರಿತರ ಶಿಬಿರದ ಬಳಿಯ ಕಾಡಿನಂಚಿನಲ್ಲಿ ಭಾರೀ ವಿಷ ಹೊಂದಿರುವ ಅಣಬೆ ಬೆಳೆದಿದ್ದು ಬಾಲಕ, ಆತನ ಸಹೋದರ ಮತ್ತು ಸಹೋದರಿ ತಿಂದಿದ್ದಾರೆ. ಬಾಲಕ ಮೃತಪಟ್ಟರೆ ಆತನ ಸಹೋದರ ಮತ್ತು ಸಹೋದರಿ ತೀವ್ರ ಅಸ್ವಸ್ಥರಾಗಿದ್ದಾರೆ. ಸಹೋದರನಿಗೆ ಕರುಳು ಕಸಿ ಚಿಕಿತ್ಸೆ ನಡೆಸಲಾಗಿದೆ. ಆತ ಚೇತರಿಸಿಕೊಳ್ಳಬಹುದು, ಆದರೆ ಮೆದುಳಿಗೆ ತೀವ್ರ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News