ಶೀಘ್ರದಲ್ಲೇ ಕಾಬೂಲ್ ವಿಮಾನನಿಲ್ದಾಣ ನಾಗರಿಕ ವಿಮಾನ ಹಾರಾಟಕ್ಕೆ ಮುಕ್ತ: ಕತರ್

Update: 2021-09-04 18:10 GMT

ದುಬೈ,ಸೆ.4 ಅಫ್ಘಾನಿಸ್ತಾನಕ್ಕೆ ರವಾನೆಯಾಗುವ ನೆರವು ಸಾಮಾಗ್ರಿಗಳನು ಸ್ವೀಕರಿಸುವುದಕ್ಕಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಪುನಾರಂಭಿಸಲು ತಾಂತ್ರಿಕ ತಂಡವೊಂದು ಯಶಸ್ವಿಯಾಗಿದೆಯೆಂದು ಅಫ್ಘಾನ್ ನಲ್ಲಿನ ಕತರ್ ರಾಯಭಾರಿ ತಿಳಿಸಿದ್ದಾರೆ. 

ಶೀಘ್ರದಲ್ಲೇ ನಾಗರಿಕ ವಿಮಾನಗಳ ಹಾರಾಟವನ್ನು ಆರಂಭಿಸಲು ಕೂಡಾ ಸಿದ್ಧತೆಗಳನ್ನು ಮಾಡಲಾಗಿದೆಯೆಂದು ಅವರು ತಿಳಿಸಿರುವುದಾಗಿ ಅಲ್ ಜಝೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.
   

ಅಫ್ಘಾನಿಸ್ತಾನದ ಅಧಿಕಾರಿಗಳ ಸಹಕಾರದೊಂದಿಗೆ ಕಾಬೂಲ್ ವಿಮಾನನಿಲ್ದಾಣವನ್ನು ದುರಸ್ತಿಗೊಳಿಸಲಾಗಿದೆ. ಕಾಬೂಲ್ ನಿಂದ ಅಫ್ಘಾನಿಸ್ತಾನದ ಇನ್ನೆರಡು ನಗರಗಳಾದ ಮಝರೆ ಶರೀಫ್ ಹಾಗೂ ಕಂದಹಾರ್ಗೆ ಎರಡು ಆಂತರಿಕ ವಿಮಾನಗಳು ಹಾರಾಟ ನಡೆಸಿರುವುದಾಗಿ ಕತರ್ ಮೂಲದ ಸುದ್ದಿವಾಹಿನಿಯಾದ ಅಲ್ ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News